ಮಾನವಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮಾನವಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮಾನವಿ ವತಿಯಿಂದ ಶಿಕ್ಷಕರಿಗೆ ಮತ್ತು ದೈಹಿಕ ಶಿಕ್ಷಕರಿಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತರದ ಶ್ರೀ ಸಂಗಣ್ಣ ಬಾಗೇವಾಡಿ ಇವರಿಂದ ಕಬಡ್ಡಿ ಆಟದ ನಿಯಮಗಳ ಕುರಿತು ಒಂದು ದಿನದ ತರಬೇತಿಯನ್ನು ಕಲ್ಮಠ ವಿದ್ಯಾಸಂಸ್ಥೆಯಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಮಾನ್ವಿ ತಾಲೂಕು ಶಿಕ್ಷಣಾಧಿಕಾರಿಗಳಾದ ಶ್ರೀಯುತ ವೆಂಕಟೇಶ್ ಗುಡಿಹಾಳ ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕರು ಶಾಲೆಯಲ್ಲಿ ಪ್ರಮುಖ ಪಾತ್ರವಹಿಸಿ ಮಕ್ಕಳಲ್ಲಿ ಶಿಸ್ತು ಕಲಿಸಲು ಪ್ರಮುಖ ರಾಗಿರುತ್ತಾರೆ ಎಂದು ಹೇಳಿದರು.
ಅದೇ ರೀತಿಯಾಗಿ ರಾಯಚೂರು ಜಿಲ್ಲೆಯ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರು ಮಾತನಾಡಿ, ದೈಹಿಕ ಶಿಕ್ಷಣ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಅದೇ ರೀತಿಯಾಗಿ ಈ ಒಂದು ದಿನದ ತರಬೇತಿ ಉಪನ್ಯಾಸ ನೀಡಲು ಬಂದ ಶ್ರೀ ಸಂಗಣ್ಣ ಬಾಗೇವಾಡಿ ಇವರು ಕಬಡ್ಡಿ ನಿಯಮಗಳ ಕುರಿತು ಮಾನ್ವಿ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ ಇಡೀ ಸವಿಸ್ತಾರವಾಗಿ ತಿಳಿಸಿದರು.
ಕಾರ್ಯಗಾರದಲ್ಲಿ ಶ್ರೀ ವಿದ್ಯಾಸಾಗರ್ ಸೇವಾದಳ ಗುಲ್ಬರ್ಗ ವಿಭಾಗದ ಅಧಿಕಾರಿಗಳು, ಶ್ರೀಕಾಂತ್ ಬಾಗೇವಾಡಿ, ಹನುಮಂತ ಕವಿತಾಳ, ಬಸವರಾಜ್ ಮಾಡಿಗಿರಿ, ಲಾಲ್ ಸಿಂಗ್ ಮಾನ್ವಿ, ಕೇಶವ್ ಮಾನ್ವಿ, ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರು ಭಾಗವಹಿಸಿ ಈ ಒಂದು ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.