ಕನಕಪುರ: ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಜು ನಾಯಕ್ ಅವರು ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ.ಶಿವಕುಮಾರ್ ರೊಂದಿಗೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೆಜ್ಜೆ ಹಾಕಿದರು .
ಈ ಸಂದರ್ಭದಲ್ಲಿ ಗಂಗಾವತಿಯ ದಲಿತ ಮುಖಂಡರಾದ ಅಂಬಣ್ಣ ನವರು ಇರ್ಫಾನ್ .ರಮೇಶ್ ನಾಯಕ್ ಮುಜಾವರ ಇದ್ದರು. ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಕೈಗೊಂಡಿರುವ ಉದ್ದೇಶ ಬೆಂಗಳೂರು ಮತ್ತು ಸುತ್ತುಮುತ್ತಲ ಪ್ರದೇಶಗಳ ಜನರಿಗೆ ಕುಡಿಯುವ ಮತ್ತು ಅಗತ್ಯ ಕೆಲಸಗಳಿಗೆ ನೀರು ಒದಗಿಸಲು. ಎರಡೂವರೆ ಕೋಟಿ ಜನರು ಈ ನೀರಿನಿಂದಲೇ ಬದುಕುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ರಾಜ್ಯದ ಉದ್ದಗಲಕ್ಕೂ ಹೋರಾಟ ನಡೆಯುತ್ತಿದೆ. ಪಾದಯಾತ್ರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ನಮ್ಮ ಗುರಿ ಮುಟ್ಟಲು ಜನತೆಯ ಆಶೀರ್ವಾದ ಬೇಕು. ನಮ್ಮ ನೀರು ನಮ್ಮ ಹಕ್ಕು. ಮೇಕೆದಾಟು ಹೋರಟಕ್ಕೆ ಜಯವಾಗಲಿ, ಪಾದಯಾತ್ರೆಯಲ್ಲಿ ಬಂದು ಭಾಗವಹಿಸಿ, ಪ್ರೋತ್ಸಾಹ, ಬೆಂಬಲ ನೀಡಿ ಎಂದು ಕೇಳಿಕೊಂಡರು.