ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಪಡೆದ ಕಮಲಾಕ್ಷಿ ತೀರ್ಥಭಾವಿಗೆ ಅಭಿನಂದನೆ

ನವದೆಹಲಿ: ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 800 ಮೀ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಪಡೆದ ಕಮಲಾಕ್ಷಿ ತೀರ್ಥಭಾವಿ ಇವರಿಗೆ ಅಭಿನಂದನೆಗಳು.

ನನಗೆ ಶಾಲಾ ದಿನಗಳಿಂದಲೂ ಆಟದ ಮೇಲೆ ಬಹಳ ಆಸಕ್ತಿಯಿತ್ತು, ಅದಕ್ಕಾಗಿ ಪಾಠದ ಜೊತೆಗೆ ಆಟಕ್ಕೆ ಬಹಳ ಮಹತ್ವವನ್ನು ಕೊಡುತ್ತ ಬಂದಿದ್ದೇನೆ. ನನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿ ದೈಹಿಕ ಶಿಕ್ಷಕರಾದ ಮಹೇಶ್ ಸರ್ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನಾನು ದೇವನಾಂಪ್ರಿಯ ಅಶೋಕ ಪ್ರಥಮ ದರ್ಜೆ ಕಾಲೇಜು ಮಸ್ಕಿಯಲ್ಲಿ ಬಿ.ಎ.ಐದನೇ ಸೆಮಿಸ್ಟರ್ ವಿದ್ಯಾಭ್ಯಾಸ ಮಾಡುತ್ತಿದ್ದು, ಇಲ್ಲಿನ ಪ್ರಾಂಶುಪಾಲರಾದ ಪಂಪನಗೌಡ ಜಿ ಪಾಟೀಲ್ ಹಾಗೂ ಎಲ್ಲಾ ನಮ್ಮ ಕಾಲೇಜಿನ ಉಪನ್ಯಾಸಕರು ಪ್ರೋತ್ಸಾಹ ನೀಡುತ್ತಿದ್ದಾರೆ.

ನಾನು ತುಂಬಾ ಬಡ ಕುಟುಂಬಕ್ಕೆ ಸೇರಿದವಳಾಗಿದ್ದು, ತೀರ್ಥಭಾವಿ ಎಂಬ ಹಳ್ಳಿಯ ಬಡ ರೈತ ದ್ಯಾಮನಗೌಡ ಮತ್ತು ನಾಗರತ್ನಮ್ಮ ದಂಪತಿಗಳ ಮಗಳಾಗಿದ್ದು,ನಾನು ತಂದೆ ತಾಯಿಗೆ,ಗ್ರಾಮಕ್ಕೆ,ತಾಲೂಕಿಗೆ, ಜಿಲ್ಲೆಗೆ ಹೆಸರು ತರುವಂತಹ ಕೆಲಸವನ್ನು ಮಾಡಬೇಕು ಎನ್ನುವ ಕನಸನ್ನು ಹೊಂದಿದ್ದೇನೆ. ದೇಶ ನಮಗೇನು ಕೊಟ್ಟಿದೆ ಅನ್ನೋದಕ್ಕಿಂತ ದೇಶಕ್ಕೆ ನಾವೇನು ಕೊಡುತ್ತೇವೆ ಎಂಬುದು ಮುಖ್ಯವಾಗಿದೆ. ಎಲ್ಲಾರ ಕಡೆಯಿಂದ ಉತ್ತಮ ಪ್ರಶಂಸೆಗಳು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಅನಿಸುತ್ತಿದೆ ಎಂದರು.

Discover more from Valmiki Mithra

Subscribe now to keep reading and get access to the full archive.

Continue reading