ಮಧುಗಿರಿ: ಪಟ್ಟಣದ ತುಮುಲ್ ಉಪಕೇಂದ್ರದ ಕ್ಷೀರ ಭವನದಲ್ಲಿ ಹಮ್ಮಿಕೊಂಡಿದ್ದ ನೂತನ ವಿಧಾನಪರಿಷತ್ ಸದಸ್ಯರಾದ ಶ್ರೀ ಆರ್ ರಾಜೇಂದ್ರ ರವರಿಗೆ ಅಭಿನಂದನೆ.
ನೂತನ ವರ್ಷದ ಡೈರಿ, ಕ್ಯಾಲೆಂಡರ್ ಬಿಡುಗಡೆ ,ಹಾಗು ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಣಾ ಸಮಾರಂಭವನ್ನು ಮಾನ್ಯ ತುಮಕೂರು ಜಿಲ್ಲೆಯ ನೂತನ ವಿಧಾನಪರಿಷತ್ ಸದಸ್ಯರಾದ ಶ್ರೀ ಆರ್.ರಾಜೇಂದ್ರ ರವರು ಉದ್ಘಾಟಿಸಿದರು. ತುಮುಲ್ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್, ಚೆನ್ನಮಲ್ಲಪ್ಪ, ಸಹಕಾರ ಮಾ.ಮ.ಮಾಜಿ ಅಧ್ಯಕ್ಷ ಎನ್ .ಗಂಗಣ್ಣ, ಎಂ.ಜಿ.ಶ್ರೀನಿವಾಸಮೂರ್ತಿ, ಜಿ.ಜೆ.ರಾಜಣ್ಣ ಆದಿನಾರಾಯಣರೆಡ್ಡಿ, ಚಿಕ್ಕೋಬರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ,ರಾಜಗೋಪಾಲ, ಪುರಸಭೆ ಹಾಲಿ ಮಾಜಿ ಅಧ್ಯಕ್ಷರು ಸದಸ್ಯರು ಒಕ್ಕೂಟದ ವಿಸ್ತರಣಾಧಿಕಾರಿಗಳು,ಹಾಲು ಸ.ಸಂಘದ ಅಧ್ಯಕ್ಷರು, ನಿರ್ದೇಶಕರು, ಕಾರ್ಯದರ್ಶಿಗಳು ಫಲಾನುಭವಿಗಳು ಮತ್ತಿತರು ಹಾಜರಿದ್ದರು.