ಮನೆಮದ್ದು : ನೀವು ಸಕ್ಕರೆ ಪ್ರಿಯರೇ: ಹಾಗಾದರೇ ಈ ಸುದ್ದಿ ಓದಲೇಬೇಕು

ಪ್ರತಿ ದಿನ ಕಾಫಿಗೆ, ಚಹಾಗೆ ಸಕ್ಕರೆ ಹಾಕಿ ಸೇವಿಸುವುದು ಮಾತ್ರವಲ್ಲದೆ ಸಿಹಿ ಬೇಕರಿ ಪದಾರ್ಥಗಳನ್ನು ತಿನ್ನುವ ಅಭ್ಯಾಸ ಇರುವುದರಿಂದ ಯಾವ ಪ್ರಮಾಣದಲ್ಲಿ ನಮ್ಮ ದೇಹದಲ್ಲಿ ಸಕ್ಕರೆಯಂಶ ಏರಿಕೆಯಾಗುತ್ತದೆ ಎಂಬ ಸಣ್ಣ ಅರಿವು ಕೂಡ ನಮಗೆ ಇರುವುದಿಲ್ಲ.

ಇದು ಮುಂಬರುವ ದಿನಗಳಲ್ಲಿ ನಮ್ಮ ಆರೋಗ್ಯಕ್ಕೆ ಅತ್ಯಂತ ಮಾರಕವಾಗಿ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಲು ಪ್ರಯತ್ನಪಡಬೇಕು. ಪ್ರತಿದಿನ ಸಾಧ್ಯವಾದಷ್ಟು ಸಕ್ಕರೆ ಅಂಶವನ್ನು ಕಡಿಮೆ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ರಕ್ಷಣೆಯನ್ನು ನಾವು ಮಾಡಿಕೊಳ್ಳುವ ಜೊತೆಗೆ ದೀರ್ಘ ಕಾಲದಲ್ಲಿ ಅನುಭವಿಸುವ ಕಾಯಿಲೆಗಳನ್ನು ತಡೆ ಹಾಕಬಹುದು.

ಸಕ್ಕರೆ ಸೇವನೆಯನ್ನು ನಮ್ಮ ಆಹಾರಪದ್ಧತಿಯಲ್ಲಿ ಕಡಿಮೆ ಮಾಡಿಕೊಳ್ಳುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ಪ್ರಯೋಜನಗಳು ಸಿಗಲಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.

  • ಚರ್ಮದ ಮೇಲೆ ಸುಕ್ಕುಗಳು ಕಂಡು ಬಂದರೆ, ದೇಹ ವಯಸ್ಸಾಗುವಿಕೆ ಪ್ರಕ್ರಿಯೆಗೆ ಗುರಿಯಾಗಿದೆ ಎಂದರ್ಥ. ಆದರೆ ಚಿಕ್ಕವಯಸಿನಲ್ಲಿ ಮುಖದ ಮೇಲೆ ಸುಕ್ಕುಗಳು ಕಂಡುಬಂದರೆ ಅದಕ್ಕೆ ಪ್ರಮುಖ ಕಾರಣ ನಮ್ಮ ಆಹಾರ ಪದ್ಧತಿ ಮಾತ್ರವೇ ಆಗಿರುತ್ತದೆ.
  • ಸಾಧ್ಯವಾದಷ್ಟು ನಾವು ಸಕ್ಕರೆ ಪ್ರಮಾಣ ಸೇವನೆ ಮಾಡುವುದನ್ನು ಕಡಿಮೆ ಮಾಡಿಕೊಂಡರೆ ಅತ್ಯುತ್ತಮ ಸೌಂದರ್ಯವನ್ನು ದೀರ್ಘ ಕಾಲ ನಮ್ಮದಾಗಿಸಿಕೊಳ್ಳಬಹುದು. ಸಂಶೋಧನೆಗಳು ಕೂಡ ಇದೇ ಮಾತನ್ನು ಹೇಳುತ್ತವೆ.
  • ನಾವು ಸೇವನೆ ಮಾಡುವ ಆಹಾರ ಪದಾರ್ಥಗಳಲ್ಲಿ ಕಂಡುಬರುವ ಅತಿಯಾದ ಜಿಡ್ಡಿನ ಅಂಶ ನಮ್ಮ ದೇಹದಲ್ಲಿ ಕೆಟ್ಟ ಕೊಬ್ಬಿನ ಅಂಶ ಅಥವಾ ಸೊಂಟದ ಭಾಗದಲ್ಲಿ ಬೊಜ್ಜಿನ ರೂಪದಲ್ಲಿ ಶೇಖರಣೆಯಾಗುತ್ತದೆ.
  • ಇದು ಒಮ್ಮೆ ಶೇಖರಣೆಯಾದರೆ ಅದರಿಂದ ಹೊರಬರುವುದು ತುಂಬಾ ಕಷ್ಟ. ಹೃದಯದ ಕಾಯಿಲೆ ಮತ್ತು ಮಧುಮೇಹ ಸಮಸ್ಯೆ ಇರುವವರು ತಮ್ಮ ಆಹಾರ ಪದ್ಧತಿಯ ಬಗ್ಗೆ ಹಾಗೂ ಎಣ್ಣೆಯ ಜಿಡ್ಡಿನಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಬಗ್ಗೆ ಹೆಚ್ಚು ಆಲೋಚನೆ ಮಾಡಬೇಕು.
  • ಸಕ್ಕರೆ ಅಂಶದ ಸೇವನೆ ಕೂಡ ಹೊಟ್ಟೆಯ ಭಾಗದಲ್ಲಿ ಬೊಜ್ಜಿನ ಅಂಶಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಸಾಧ್ಯವಾದಷ್ಟು ತಮ್ಮ ಆಹಾರಪದ್ಧತಿಯಲ್ಲಿ ಕಡಿಮೆ ಸಿಹಿಯನ್ನು ಸೇವನೆ ಮಾಡಿದರೆ ಉತ್ತಮ.
  • ಸಣ್ಣ ಪ್ರಮಾಣದ ಕಾರ್ಬೋಹೈಡ್ರೇಟ್ ಅಂಶಗಳನ್ನು ನಿಮ್ಮ ದೇಹಕ್ಕೆ ನಿರಂತರವಾಗಿ ಸೇರಿಸುತ್ತಾ ಹೋದರೆ ನಿಮ್ಮ ದೇಹದ ಜೀರ್ಣ ಶಕ್ತಿ ಬೇರೆ ರೂಪಕ್ಕೆ ತಿರುಗಿಕೊಳ್ಳುತ್ತದೆ. ಹಾಗಾಗಿ ಪ್ರತಿ ಬಾರಿ ಆಹಾರ ಸೇವನೆ ಮಾಡುವಾಗ ನಿಮ್ಮ ದೇಹಕ್ಕೆ ಎಲ್ಲ ಬಗೆಯ ಪೌಷ್ಟಿಕ ಸತ್ವಗಳನ್ನು ಸೇರಿಸುತ್ತಿದ್ದೇವೆ ಎಂಬ ಖಾತ್ರಿ ಇರಬೇಕು. ಸಕ್ಕರೆ ಅಂಶ ನಿಮ್ಮ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಗೆ ಒಳಪಡುತ್ತದೆ.
  • ಆದರೆ ನೀವು ಸಕ್ಕರೆಯನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿದರೆ ಉತ್ತಮ. ಕೃತಕವಾದ ಸಕ್ಕರೆಯಂಶವನ್ನು ಬಳಕೆ ಮಾಡುವ ಬದಲು ನೈಸರ್ಗಿಕವಾದ ಸಕ್ಕರೆಯಂಶ ತುಂಬಿರುವ ಬಾದಾಮಿ ಬೀಜಗಳು, ಒಣ ದ್ರಾಕ್ಷಿ, ಗೋಡಂಬಿ ಇತ್ಯಾದಿಗಳನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಸಿಗುವುದು ಮಾತ್ರವಲ್ಲದೆ ಅತ್ಯುತ್ತಮವಾದ ಪ್ರೊಟೀನ್ ಅಂಶ ಕೂಡ ಸಿಗುತ್ತದೆ. ಇದರಿಂದ ನಿಮ್ಮ ದೇಹದ ಮಾಂಸಖಂಡಗಳು ಅಭಿವೃದ್ಧಿಗೊಂಡು ನಿಮ್ಮ ದೇಹದ ಸದೃಡತೆ ಕೂಡ ಹೆಚ್ಚಾಗುತ್ತದೆ.
  • ನಾವು ಸೇವನೆ ಮಾಡುವ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಕಂಡು ಬರುವ ಕ್ಯಾಲೊರಿ ಅಂಶಗಳು ನಮ್ಮ ದೇಹದಲ್ಲಿ ಬೊಜ್ಜಿಗೆ ಕಾರಣವಾಗುತ್ತವೆ.
  • ಆದರೆ ಕ್ಯಾಲೋರಿ ಅಂಶಗಳನ್ನು ಮತ್ತು ಸಕ್ಕರೆ ಅಂಶಗಳನ್ನು ನಿರ್ವಹಣೆ ಮಾಡಿಕೊಳ್ಳುವುದರಿಂದ ನಮ್ಮ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ.
  • ಮೊದಲೇ ಹೇಳಿದಂತೆ ಮಧುಮೇಹ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಸಕ್ಕರೆ ಅಂಶವನ್ನು ಹೆಚ್ಚಾಗಿ ಸೇವನೆ ಮಾಡಬಾರದು. ನಿಮ್ಮ ಆಹಾರ ಪದ್ಧತಿಯಲ್ಲಿ ಸಕ್ಕರೆ ಅಂಶ ಹೆಚ್ಚಾದರೆ ಅದು ನೇರವಾಗಿ ನಿಮ್ಮ ಹೃದಯದ ಮೇಲೆ ಪ್ರಭಾವ ಬೀರುತ್ತದೆ.

Discover more from Valmiki Mithra

Subscribe now to keep reading and get access to the full archive.

Continue reading