ತುಮಕೂರು: ಜಿಲ್ಲೆಯ ಕೊರಟಗೆರೆ ತಾಲ್ಲೂಕು ಸಿ.ಎನ್.ದುರ್ಗ ಹೋಬಳಿಯ ತೋವಿನಕೆರೆ ಗ್ರಾಮದ ಟಿ.ಎಸ್.ಕೃಷ್ಣಮೂರ್ತಿ ರವರಿಗೆ, ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಒಕ್ಕೂಟ ಬೆಂಗಳೂರು, ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ರವರ ಸಂಯುಕ್ತ ಆಶ್ರಯದಲ್ಲಿ 31/12/2020 ರಂದು “ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತ್ಯ, ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗೆ, 2020-21ನೇ ಸಾಲಿನ ಪ್ರತಿಷ್ಟಿತ “ಸುವರ್ಣ ಕನ್ನಡಿಗ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ ಲೋಕಯುಕ್ತರಾದ ಶ್ರೀ ಸಂತೋಷ್ ಹೆಗ್ಡೆ, ಹಾಗು ಕರ್ನಾಟಕ ಹಿಂದುಳಿದ ವರ್ಗಗಳ ಒಕ್ಕೂಟದ ಅದ್ಯಕ್ಷರಾದ ಶ್ರೀನಿವಾಸಬಾಬು ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು,ಚಿತ್ರಕಲಾ ಅಕಾಡಮಿ ಅಧ್ಯಕ್ಷರು ಹಾಜರಿದ್ದರು.