ಏಲಕ್ಕಿ ಶ್ರೀಮಂತ ವಾಸನೆ ಮತ್ತು ಆರೋಗ್ಯಕರ ಗುಣಗಳನ್ನು ಒಳಗೊಂಡಿರುವ ಮಸಾಲ ಪದಾರ್ಥ. ಇದನ್ನು ಮಸಾಲೆಯ ರಾಣಿ ಎಂದು ಸಹ ಕರೆಯುವರು. ಇದರ ಪರಿಮಳವು ಸಿಹಿ ಮತ್ತು ಖಾರದ ಖಾದ್ಯಗಳಿಗೆ ಅದ್ಭುತ ಸಂಯೋಜನೆಯನ್ನು ನೀಡುವುದು.ಏಲಕ್ಕಿಯ ಸೇವನೆಯಿಂದ ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ನಿವಾರಿಸಬಹುದು.
ಏಲಕ್ಕಿಯ ಬೀಜಗಳು ಸಾರಭೂತ ತೈಲವನ್ನು ಹೊಂದಿರುತ್ತದೆ. ಇದು ಆಲ್ಫಾ-ಟೆರ್ಫಿನೋಲ್ ಶೇ.45 ರಷ್ಟು, ಮೈರ್ಸೀನ್ ಶೇ.27, ಲಿಮೋನೆನ್ ಶೇ.8ರಷ್ಟು, ಮೆಂಥೋನ್ ಶೇ.6ರಷ್ಟು ಫೈಟೋಕೆಮಿಕಲ್ಸ್‍ಗಳಿಂದ ಕೂಡಿದೆ. ಇವೆಲ್ಲವೂ ಸುವಾಸನೆ ಭರಿತ ಗಿಡಮೂಲಿಕೆಯ ಚಿಕಿತ್ಸಕ ಗುಣಗಳು. ಏಲಕ್ಕಿ ವಾತಾ, ಪಿತ್ತ ಮತ್ತು ಕಫದ ದೋಷಗಳನ್ನು ಸಮತೋಲನದಲ್ಲಿ ನಿಯಂತ್ರಿಸುವ ಗುಣವನ್ನು ಪಡೆದುಕೊಂಡಿದೆ. ಇದನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ಏಲಕ್ಕಿಯಲ್ಲಿರುವ ಸಾರಭೂತ ತೈಲ ಮೆಂಥೋನ್ ಜಠರದ ಸಮಸ್ಯೆಗಳಾದ ಆಮ್ಲೀಯತೆ, ವಾಯು, ಅಜೀರ್ಣ ಮತ್ತು ಹೊಟ್ಟೆ ನೋವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಉತ್ತಮ ರೀತಿಯಲ್ಲಿ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ಹೊಟ್ಟೆಯಲ್ಲಿ ಉರಿಯ ಸಂವೇದನೆಯನ್ನು ತಡೆಯುವುದು. ಸುಡುವಂತಹ ಸಂವೇದನೆಗಳನ್ನು ನೀಡುವ ಆರೋಗ್ಯ ಸಮಸ್ಯೆಗಳಿಗೆ ಏಲಕ್ಕಿಯನ್ನು ಉತ್ತಮ ಪರಿಹಾರ ನೀಡುವುದು.
ಏಲಕ್ಕಿ ಆಂಟಿಮೆಟಿಕ್ ಗುಣಗಳನ್ನು ಹೊಂದಿದೆ. ಇದು ವಾಕರಿಕೆ ಹಾಗೂ ವಾಂತಿಯಂತಹ ಸಂವೇದನೆಯನ್ನು ಶಾಂತಗೊಳಿಸುವುದು. ಹುಳಿ ಸಂವೇದನೆಯ ವಾಂತಿಯಯಿಂದ ಉಂಟಾಗುವ ಸುಡುವಿಕೆಯನ್ನು ತಂಪುಗೊಳಿಸುವುದು. ದೂರದ ಸ್ಥಳಗಳಿಗೆ ಪ್ರಯಾಣಿಸುವಾಗ ಟ್ರಾವೆಲ್ ಕಿಟ್‍ನಲ್ಲಿ ಏಲಕ್ಕಿಯನ್ನು ಸಹ ಇಟ್ಟುಕೊಳ್ಳಬಹುದು. ಮುಂಜಾನೆಯ ವಾಕರಿಕೆ ಸಮಸ್ಯೆ ಹೊಂದಿರುವ ಗರ್ಭಿಣಿಯರು ಏಲಕ್ಕಿಯ ಪರಿಮಳವನ್ನು ಗ್ರಹಿಸಿ, ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಏಲಕ್ಕಿ ಪ್ರಬಲವಾದ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಇದು ಉತ್ತಮ ಹಲ್ಲಿನ ನೈರ್ಮಲ್ಯದ ಜೊತೆಗೆ ಕೆಟ್ಟ ಉಸಿರನ್ನು ಶಾಶ್ವತವಾಗಿ ತೊಡೆದುಹಾಕಲು ಸಹಾಯ ಮಾಡುವುದು. ಏಲಕ್ಕಿ ಎಣ್ಣೆಯಲ್ಲಿರುವ ಫೈಟೋಕೆಮಿಕಲ್ ಮತ್ತು ಸಿನೋಲ್ ಗುಣವು ಬ್ಯಾಕ್ಟೀರಿಯವನ್ನು ನಾಶಪಡಿಸುವುದು. ಕೆಟ್ಟ ಉಸಿರು, ಹಲ್ಲಿನಲ್ಲಿ ಕುಳಿ ಬೀಳುವುದು ಹಾಗೂ ಅನುಚಿತವಾಗಿ ಹುಟ್ಟುವ ಹಲ್ಲುಗಳನ್ನು ತಡೆಯುತ್ತದೆ. ಏಲಕ್ಕಿ ಹಣ್ಣು ಮತ್ತು ಬೀಜದ ಸಾರವು ಜೀವ ವಿರೋಧಿ ಲಕ್ಷಣವನ್ನು ಹೊಂದಿದೆ. ಉರಿಯೂತ ಲಕ್ಷಣಗಳ ಮೂಲಕ ಆವರ್ತಕ ಸೋಂಕುಗಳ ವಿರುದ್ಧ ಚಿಕಿತ್ಸಕ ರೂಪದಲ್ಲಿ ಕೆಲಸ ನಿರ್ವಹಿಸುತ್ತದೆ.
ಏಲಕ್ಕಿ ಆಂಟಿಟಸ್ಸಿವ್ ಮತ್ತು ಮ್ಯೂಕೋಲಿಟಿಕ್ ಗುಣಗಳನ್ನು ಹೊಂದಿದೆ. ಇದು ಲೋಳೆಯ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಮ್ಮು ಮತ್ತು ಶೀತವನ್ನು ನಿವಾರಿಸುವುದರ ಜೊತೆಗೆ ಶ್ವಾಸಕೋಶದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಉಸಿರಾಟದ ಕ್ರಿಯೆಯು ಸುಧಾರಣೆಯನ್ನು ಕಾಣುವುದು. ಶ್ವಾಸಕೋಶಕ್ಕೆ ಉತ್ತಮ ಆರೋಗ್ಯವನ್ನು ನೀಡುವುದು.
ಏಲಕ್ಕಿ ದೇಹಕ್ಕೆ ಪ್ರಬಲವಾದ ನಿರ್ವಿಶೀಕರಣಕಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ರಕ್ತದಲ್ಲಿ ಇರುವ ವಿಷಕಾರಿ ಅಂಶವನ್ನು ಕಡಿಮೆ ಮಾಡುತ್ತದೆ. ಸೌಮ್ಯ ಮೂತ್ರವರ್ಧನೆಯನ್ನು ವೃದ್ಧಿಸುವುದು. ಜೀವಾಣುಗಳ ನಿರ್ಮೂಲನೆಯನ್ನು ಹೆಚ್ಚಿಸುವುದು. ಏಲಕ್ಕಿಯಲ್ಲಿ ಇರುವ ಸಾರಭೂತ ಎಣ್ಣೆಯಂಶವು ಫೈಟೋ ಕೆಮಿಕಲ್ ನಿರ್ವಿಶೀಕರಣ ಪರಿಣಾಮಗಳನ್ನು ಒದಗಿಸುತ್ತದೆ. ಇದರಿಂದ ಅಪಾಯಕಾರಿ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು.
ಒಂದು ಎರಡು ಏಲಕ್ಕಿಯನ್ನು ಬಾಯಲ್ಲಿ ಅಗೆಯಬಹುದು. ಇಲ್ಲವೇ ಸೋಂಪಗಳೊಂದಿಗೆ ಸೇರಿಸಿ ಸವಿಯಬಹುದು. ಬಿಸಿ ನೀರಿಗೆ ಚಿಟಕೆ ಏಲಕ್ಕಿ ಪುಡಿ ಸೇರಿಸಿ ಕುಡಿಯಬಹುದು. ಇಲ್ಲವೇ ಏಲಕ್ಕಿಯನ್ನು ನಾವು ತಯಾರಿಸುವ ರೈಸ್ ಬಾತ್, ಸಿಹಿ ತಿಂಡಿ, ಖಾರದ ತಿಂಡಿಯೊಂದಿಗೆ, ಮೇಲೊಗರಗಳನ್ನಾಗಿ ಬಳಸಿ ಸವಿಯಬಹುದು.