ನವದೆಹಲಿ; ಕೋವಿಡ್-19 ಪ್ರಕರಣಗಳ ಆತಂಕದ ನಡುವೆಯೇ ಕೇಂದ್ರ ಚುನಾವಣಾ ಆಯೋಗ ಮಹತ್ವದ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಇಂದು ಘೋಷಣೆ ಮಾಡಿದೆ. ತಕ್ಷಣದಿಂದಲೇ ಈ ಐದು ರಾಜ್ಯ ಗಳಲ್ಲಿ ನೀತಿ ಸಂಹಿತೆ ಜಾರಿಗೆ ಆಗಲಿದೆ ಎಂದಿದೆ.
ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಈ ಕುರಿತು ಮಾತನಾಡಿದ್ದು, ಉತ್ತರ ಪ್ರದೇಶ, ಉತ್ತರಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆಯು 7 ಹಂತಗಳಲ್ಲಿ ಪೆಬ್ರವರಿ 10 ರಿಂದ ಮತದಾನ ನಡೆಯಲಿದ್ದು, ಫಲಿತಾಂಶ ಮಾರ್ಚ್ 10 ಕ್ಕೆ ಫಲಿತಾಂಶ ಹೊರಬಿಳಲಿದೆ.
ಉತ್ತರ ಪ್ರದೇಶ ಫೆಬ್ರವರಿ 10ನೇ ತಾರೀಕಿನಿಂದ ಮೊದಲ ಹಂತ, 14ನೇ ತಾರೀಕಿನಿಂದ 2ನೇ ಹಂತ, 20ಕ್ಕೆ ಮೂರನೇ ಹಂತ, 23ಕ್ಕೆ ನಾಲ್ಕನೇ ಹಂತ, 27ಕ್ಕೆ ಐದನೇ ಹಂತ, ಆರನೇ ಹಂತ ಮಾರ್ಚ್ 3 ಮತ್ತು ಎಳನೇ ಹಂತ ಮಾರ್ಚ್ 7ಕ್ಕೆ ಮತದಾನ ನಡೆಯಲಿದೆ. ಗೋವಾ, ಉತ್ತರಾಖಂಡ್ ಮತ್ತು ಪಂಜಾಬ್ಗೆ ಎರಡನೇ ಹಂತದ ಮತದಾನ ಫೆ.14ನೇ ತಾರೀಕು ನಡೆಯಲಿದೆ.
ಚುನಾವಣಾ ಪಕ್ಷಗಳಿಗೆ ಡಿಜಿಟಲ್, ವರ್ಚುವಲ್ ರೀತಿಯಲ್ಲಿ ಪ್ರಚಾರ ಮಾಡಲು ಆಯೋಗಗ ನಿರ್ದೇಶಿಸಿದೆ. ಕೊರೋನಾ ಪ್ರಕರಟಣಗಳು ಹೆಚ್ಚುತ್ತಿರುವ ಹಿನ್ನೆಲೆ ಜನವರಿ 15 ರವರೆಗೆ ಯಾವುದೇ ರ್ಯಾಲಿ, ರೋಡ್‌ಶೋ ಮತ್ತು ಪಾದಯಾತ್ರೆ ಮಾಡಲು ಅವಕಾಶವಿಲ್ಲ. ತದ ನಂತರ ಪರಿಸ್ಥಿತಿ ಅವಲೋಕಿಸಿ ಮುಂದಿನ ಸೂಚನೆ ನೀಡುವುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.