ಮೈಸೂರು: ವರುಣಾ ಕ್ಷೇತ್ರದ ತಗಡೂರು ಗ್ರಾಮದಲ್ಲಿ ವಿದ್ಯುತ್ ಬಿಲ್ ಪಾವತಿಸಲು ತಡವಾಗಿದ್ದಕ್ಕೆ ಸಂಪರ್ಕ ಕಡಿತ ಮಾಡಿದ್ದಾರೆಂದು ಅಲ್ಲಿನ ಸ್ಥಳೀಯರು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯರಿಗೆ ದೂರು ನೀಡಿದ್ದಾರೆ.
ಇದರಿಂದಾಗಿ ಚೆಸ್ಕಾಂ ಅಧಿಕಾರಿಯನ್ನು ಶಾಸಕ ಡಾ.ಯತೀಂದ್ರ ತರಾಟೆಗೆ ತೆಗೆದುಕೊಂಡು, ನೀವು ದೊಡ್ಡ ಪ್ಯಾಕ್ಟರಿಗಳಲ್ಲಿ ವಿದ್ಯುತ್ ಬಿಲ್ ಸರಿಯಾಗಿ ವಸೂಲಿ ಮಾಡಿ. ಆದರೆ. ಕಷ್ಟದಲ್ಲಿರುವ ಜನರು 500 ರೂ. ವಿದ್ಯುತ್ ಬಿಲ್ ಪಾವತಿಸಿದರೂ ತೆಗೆದುಕೊಳ್ಳಿ. ಜನರ ಬಳಿ ಕಂತು ರೂಪದಲ್ಲಿ ವಿದ್ಯುತ್ ಬಿಲ್ ಹಣ ಪಡೆಯಿರಿ. ಪೂರ್ತಿಯಾಗಿ ಹಣ ಪಾವತಿಸಿಲ್ಲ ಎಂದು ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಎಚ್ಚರಿಕೆ ನೀಡಿದ್ದಾರೆ.
ನೇರವಾಗಿ ಚೆಸ್ಕಾಂ ಅಧಿಕಾರಿ ವಿರುದ್ಧ ಗರಂ ಆದ ಶಾಸಕ ಯತೀಂದ್ರ, ಅಧಿಕಾರಿಗಳು ಇರುವುದು ಜನರ ಸಮಸ್ಯೆಯನ್ನು ಕೇಳುವುದಕ್ಕೆ. ಆದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಅಲ್ಲ. ಅಧಿಕ ಪ್ರಸಂಗ ಮಾಡಬೇಡಿ ಎಂದು ಅಧಿಕಾರಿಗೆ ಗ್ರಾಮಸ್ಥರ ಮುಂದೆ ಕ್ಲಾಸ್ ತೆಗೆದುಕೊಂಡ ಪ್ರಸಂಗ ಎದುರಾಯಿತು.