ಇಂದು ಯಶ್ ಹುಟ್ಟು ಹಬ್ಬ ಹಿನ್ನಲೆ KGF-2 ಸ್ಪೆಷಲ್ ಪೋಸ್ಟರ್ ಬಿಡುಗಡೆ.!

ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ಹಿನ್ನೆಲೆಯಲ್ಲಿ ಕೆಜಿಎಫ್​-2 ಚಿತ್ರ ತಂಡದಿಂದ ಅಭಿಮಾನಿಗಳಿಗೆ ವಿಶೇಷ ಗಿಫ್ಟ್​ ಲಭಿಸಿದೆ. ಹೊಂಬಾಳೆ ಸಂಸ್ಥೆಯು ಬಹುನಿರೀಕ್ಷಿತ ಚಿತ್ರದ ಪೋಸ್ಟರ್​ವೊಂದನ್ನು ಬಿಡುಗಡೆ ಮಾಡಿದೆ.
ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣಗಳ ಹೊಂಬಾಳೆ ಸಂಸ್ಥೆ ಅಧಿಕೃತ ಖಾತೆಗಳಲ್ಲಿ ಪೋಸ್ಟ್​ ಮಾಡಿ ಯಶ್​ಗೆ ಶುಭಾಶಯ ಕೋರಲಾಗಿದೆ. ‘ಎಚ್ಚರಿಕೆ, ಮುಂದೆ ಅಪಾಯವಿದೆ ! ನಮ್ಮ ರಾಕಿ ಭಾಯ್​​ಗೆ ಜನ್ಮದಿನದ ಶುಭಾಶಯಗಳು’ ಎಂದು ಹೊಂಬಾಳೆ ಟ್ವೀಟ್​ ಮಾಡಿದೆ.
ಪೋಸ್ಟರ್​ ಶೇರ್​​​​​ ಆಗುತ್ತಿದ್ದಂತೆ ಅಭಿಮಾನಿಗಳು ಲೈಕ್​, ಪ್ರತಿಕ್ರಿಯೆಗಳ ಮೂಲಕ ನೆಚ್ಚಿನ ನಟನಿಗೆ ಶುಭ ಕೋರುತ್ತಿದ್ದಾರೆ.

Discover more from Valmiki Mithra

Subscribe now to keep reading and get access to the full archive.

Continue reading