ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಭಿನ್ನಾಭಿಪ್ರಾಯದಿಂದ ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ ; ದುರಸ್ತಿಗೆ ಒತ್ತಾಯ

ಕೊರಟಗೆರೆ: ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಭಿನ್ನಾಭಿಪ್ರಾಯದಿಂದ ಮುಗಿಯಾಬೇಕಿದ್ದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು , ಇದರಿಂದ ಜನಸಾಮಾನ್ಯರು ದಿನನಿತ್ಯ ಸಮಸ್ಯೆ ಅನುಭವಿಸುವಂತಹ ಸ್ಥಿತಿ ಕೊರಟಗೆರೆ ತಾಲೂಕು ಸಿಎನ್ ದುರ್ಗಾ ಹೋಬಳಿಯ ಮಲ್ಲೇಕವು ಪೋಸ್ಟ್ ಗೌರಿ ಕಲ್ಲು ಗ್ರಾಮದಲ್ಲಿ ನಡೆದಿದೆ.

ಈ ರಸ್ತೆಯ ಮೂಲಕ ದ್ವಿಚಕ್ರ ವಾಹನಗಳು, ರೈತರ ಚಕ್ಕಡಿಗಳು, ಲಾರಿ, ಸೈಕಲ್ ಸೇರಿದಂತೆ ಹಲವಾರು ವಾಹನಗಳು ದಿನಾಲು ಸಂಚರಿಸುತ್ತಿರುವಾಗ ರಸ್ತೆಯನ್ನು ಗುತ್ತಿಗೆ ಪಡೆದವರು ಮತ್ತು ಶಾಸಕರಿಂಗೆ ಕಾರ್ಯಕರ್ತರಿಗೆ ಜನಪ್ರತಿನಿಧಿಗಳು ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆ ಮಧ್ಯದಲ್ಲಿ ಕಲ್ಲುಗಳು ಎದ್ದು ತಗ್ಗು-ದಿಣ್ಣೆ ನಿರ್ಮಾಣವಾಗಿದ್ದು, ಅಪಘಾತಗಳು ಕೂಡ ಸಂಭವಿಸಿದೆ ಎನ್ನಲಾಗಿದೆ.

ಇದೇ ವಿಚಾರವಾಗಿ ಊರಿನ ಗ್ರಾಮಸ್ಥರೊಬ್ಬರು ಮಾತನಾಡಿ, ರಸ್ತೆ ಬದೀಯಲ್ಲಿದಂತಹ ಜಲ್ಲಿಕಲ್ಲು ರೋಡಿಗೆ ಬಂದಿದ್ದು, ರೋಡಲಿ ಓಡೋಕೆ ತುಂಬಾ ಕಷ್ಟ ಆಗ್ತಾ ಇದೆ. ರಾತ್ರಿ ಬೈಕಲ್ಲಿ ಬರೋದು ಕಷ್ಟ ಆಗ್ತಾ ಇದೆ. ಸುಮರು 1 ಮೈಲಿ ವರೇಗೂ ರಸ್ತೆ ಗುಂಡಿ ಆಳಾಗಿದ್ದು, ದಯಾವಿಟ್ಟು ಕಾಮಗಾರಿಯನ್ನು ಮುಗಿಸಿಕೊಂಡಿ ಎಂದು ಮನವಿ ಮಾಡಿದರು. ಮಾಡಿರುವ ಅರ್ಧ ರಸ್ತೆಯು ಕಳೆಪೆ ಮಟ್ಟದ್ದಾಗಿದೆ ಈ ಕುರಿತು ಗ್ರಾಮಸ್ಥರು ಹಾಗೂ ರೈತರು ಶಾಸಕರ ಗಮನಕ್ಕೆ ತರಲಾಗಿದೆ ಎಂದು ಸಾರ್ವಜನಿಕರು ಅಳಲು ತೊಡಿಕೊಂಡರು.

Discover more from Valmiki Mithra

Subscribe now to keep reading and get access to the full archive.

Continue reading