ಮುಂಬೈ: ಬಾಲಿವುಡ್‌ನ ಖ್ಯಾತ ನಟರಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರಾಗಿದ್ದು, ಇವರು ಫಿಟೆಸ್ಟ್ ಸ್ಟಾರ್ ಎಂದೇ ಖ್ಯಾತರಾಗಿದ್ದು, ಸದ್ಯ ತಮ್ಮ ದಪ್ಪ ಹೊಟ್ಟೆಯಿಂದಾಗಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.
ಇತ್ತೀಚಿಗೆ ನಟ ಸಲ್ಮಾನ್ ಖಾನ್ ದಪ್ಪಗೆ ಕಾಣುತ್ತಿದ್ದು, ಇದನ್ನು ಗಮನಿಸಿದ ಅಭಿಮಾನಿಗಳು ತಮ್ಮಆಘಾತವನ್ನು ವ್ಯಕ್ತಪಡಿಸಿದ್ದಾರೆ.ಇವರ ದಬಾಂಗ್ ಸಿನಿಮಾದ ಹಾಡಿನ ಡ್ಯಾನ್ಸ್ ವಿಡಿಯೋ ವೈರಲ್ ಆಗುತ್ತಿದ್ದು, ಸಲ್ಲುಗೆ ಇತ್ತೀಚೆಗೆ ಹಾವು ಕಚ್ಚಿ ನಟ ಆರು ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದರು. ಇದಾದ ಬಳಿಕ ಚೇತರಿಕೆಗೊಂಡು ತಮ್ಮ ಪ್ರೀತಿಪಾತ್ರರ ಜೊತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಅವರು ತಮ್ಮ ಮುಂದಿನ ಸಿನಿಮಾ ಟೈಗರ್ 3 ನಲ್ಲಿ ಸೂಪರ್‌ಸ್ಟಾರ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ಕತ್ರಿನಾ ಕೈಫ್ ನಾಯಕಿಯಾಗಿ ನಟಿಸಲಿದ್ದು, ಬಹಳ ಸಮಯದ ನಂತರ ಈ ಸೂಪರ್‌ಸ್ಟಾರ್‌ಗಳನ್ನು ಒಟ್ಟಿಗೆ ನೋಡಲು ಜನ ಕಾತುರದಿಂದ ಕಾಯುತ್ತಿದ್ದಾರೆ.