ಬೆಂಗಳೂರು: ನೂತನವಾಗಿ ಆಯ್ಕೆಯಾದ ವಿಧಾನಪರಿಷತ್ ಸದಸ್ಯರ ಪ್ರಮಾಣವಚನ ಕಾರ್ಯಕ್ರಮ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಿತು.
ದೇಶದಲ್ಲಿ ಹೊಸ ಇತಿಹಾಸ ಎಂದು ಹೇಳಬಹುದು ಒಂದೇ ಕುಟುಂಬದ 4 ಜನ ವಿಧಾನ ಸಭಾದಲ್ಲಿ ಜನಸೇವೆ ಮಾಡುತ್ತಿರುವುದು. ವಿಧಾನ ಪರಿಷತ್ ಸದಸ್ಯರಾಗಿ ಜಾರಕಿಹೊಳಿ ಕುಟುಂಬದ 4 ನೇ ಕುಡಿ ಲಖನ್ ಜಾರಕಿಹೊಳಿ ಅವರು ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರಿಸಿದ ನಂತರ ಲಖನ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರೊಂದಿಗೆ ಖುಷ್ ಖುಷಿಯಾಗಿ ಮಾತನಾಡಿದರು, ಏನಯ್ಯ ಲಖನ್ ಜಾರಕಿಹೊಳಿ ಎಂದು ನಗುತ್ತಲೇ ಸಿದ್ದರಾಮಯ್ಯ ವಿಶ್ ಮಾಡಿದರು. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರು ಹಾಜರಿದ್ದರು.