ಅಥಣಿ: ತಾಲೂಕಿನ ರಡ್ಡೇರಟ್ಟಿ ಗ್ರಾಮದ ಕಸ್ತೂರಿಬಾಯಿ ವಸತಿ ನಿಲಯದಲ್ಲಿ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಅಲ್ಲಿನ ಶೌಚಾಲಯದ ಇಂಗುಗುಂಡಿ ತುಂಬಿ ಹೋಗಿದ್ದು ನೀರು ಹೊರಗಡೆ ಬಂದು ಮಕ್ಕಳು ಆಟ ಆಡುವ ಸ್ಥಳದಲ್ಲಿ ಹರಿದು ಹೋಗಿದೆ.
ಇದ್ದರಿಂದ ಆದ್ದರಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇನ್ನೂ ಅಲ್ಲಿನ ಗ್ರಾಮಸ್ಥರು ವಸತಿ ಶಾಲೆಗೆ ಬಂದು ಅಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ.
ಕೊರೊನಾ ಎಂಬ ಮಹಾಮಾರಿ ವಕ್ಕರಿಸಿಕೊಂಡಿದೆ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಕೇಸ್ ಗಳು ಬರುತ್ತಲೇ ಇವೇ ಮೊದಲೇ ಮಕ್ಕಳ ವಿದ್ಯಾಭ್ಯಾಸದಲ್ಲಿ ಕುಂಠಿತವಾಗಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಚಾರ ಮಾಡುತ್ತಿರುವ ಪಾಲಕರು ಇಂತಹ ಸಮಯದಲ್ಲಿ ಈ ರೀತಿಯ ವ್ಯವಸ್ಥೆ ಆಗಿದೆ ಅದರ ಬಗ್ಗೆ ಯಾವ ಅಧಿಕಾರಿಗಳು ಸಹ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದಂತಹ ಅಣ್ಣಪ್ಪ ಗಲಗಲಿ, ಸದಸ್ಯರು ಲಕ್ಕಪ್ಪ ನಾಯಿಕ, ಲಕ್ಷ್ಮಣ್ ಗುರುನಾಥ್ ಸನದಿ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.