ಮಸ್ಕಿ : ಭಾರತೀಯ ಜನತಾ ಪಾರ್ಟಿ ಮಸ್ಕಿ ಮಂಡಲ ವತಿಯಿಂದ ಕಾಂಗ್ರೆಸ್ ಪಕ್ಷದ ಗೂಂಡಾ ಸಂಸ್ಕೃತಿ ವಿರುದ್ಧ ಪ್ರತಿಭಟನೆ ಮಾಡಲಾಯಿತು.
ರಾಮನಗರ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಆಗಮಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಸಚಿವ ಸಂಪುಟದ ಸಹೋದ್ಯೋಗಿಗಳು ಭಾಗವಹಿಸಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಚಾಲನೆ ಮಾಡುವ ವೇದಿಕೆಯಲ್ಲಿ ಗೂಂಡಾ ಸಂಸ್ಕೃತಿ ತೋರಿಸಿದ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷರದ ಡಿ. ಕೆ ಶಿವಕುಮಾರ್ ಸಹೋದರ ರಾಮನಗರ ಸಂಸದ ಡಿ. ಕೆ ಸುರೇಶ್ ಹಾಗೂ ಕಾಂಗ್ರೆಸ್ ಪಕ್ಷದ ಇನ್ನಿತರ ಮುಖಂಡರು ಅಭಿವೃದ್ಧಿ ಸಹಿಸದ ಕಾಂಗ್ರೆಸ್ ಪಕ್ಷದ ವಿರುದ್ದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಮಂಡಲ ಪ್ರಧಾನಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ ಮಾತನಾಡಿದರು ಹಾಗೂ ಬಿಜೆಪಿಯ ಯುವ ಮುಖಂಡರು ಪುರಸಭೆ ಸದಸ್ಯರಾದ ಚೇತನ್ ಪಾಟೀಲ್, ಮಸ್ಕಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ನಾಗರಾಜ್ ಯಂಬಲದ, ಕಾರ್ಯದರ್ಶಿ ರಮೇಶ್, ಮೌನೇಶ ನಾಯಕ, ಎಸ್ಸಿ ಮೋರ್ಚಾ ಅಧ್ಯಕ್ಷರು ಪುರಸಭೆ ಸದಸ್ಯರಾದ ಮೌನೇಶ ಮುರಾರಿ ಕೂಡ ಮಾತನಾಡಿದರು.
ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಣಿ ಸದಸ್ಯರಾದ ಜಿ. ವೆಂಕಟೇಶ್ ನಾಯಕ್ ಮಸ್ಕಿ ಬಿಜೆಪಿ ಪುರಸಭೆ ಸದಸ್ಯರಾದ ಮಲ್ಲಯ್ಯ ಅಂಬಾಡಿ, ಭರತ್ ಕುಮಾರ್, ಮಂಜುನಾಥ್ ನಂದ್ಯಾಳ ಮಸೂದ್ ಪಾಷಾ , ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ದಾಸರು, ನಾಗರತ್ನ ಹಾಗೂ ಶಾಂತಮ್ಮ, ದುರುಗಮ್ಮ ,ಗೌರಮ್ಮ ಧನಶೆಟ್ಟಿ, ಪಕ್ಷದ ಮುಖಂಡರಾದ ಯಮನರಪ್ಪ ಬೋವಿ, ಬಸವರಾಜ ಮುಕ್ಕಣ್ಣ ಅಂಬರೀಷ್ ಬ್ಯಾಳಿ , ಮೈಬು ಕುಷ್ಟಗಿ, ಆರ್. ಕೆ ನಾಯಕ್ ಹನುಮಂತ ಉಪ್ಪಾರ ಅಮರಯ್ಯ, ಸೊಪ್ಪಿಮಠ ಸಂಗನಗೌಡ ಅಮರಯ್ಯ ವೆಂಕಟಾಪುರ ,ಪಕ್ಷದ ಕಾರ್ಯಕರ್ತರು ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.