ತೆಕ್ಕಲಕೋಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದೇಶದ ಮೆರೆಗೆ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ವಿತರಣೆ ಇಂದಿನಿಂದ ಆರಂಭವಾಗಿದೆ.
ಇಂದು ತೆಕ್ಕಲಕೋಟೆ ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ಮಕ್ಕಳಿಗೆ ಕೋವಾಕ್ಸೀನ್ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಕ್ಕಳಿಗೆ ಲಸಿಕೆ ನೀಡಿದ ನಂತರ ಅರ್ಧ ಗಂಟೆ ಕಾಲ ಅವರನ್ನು ನಿಗಾವಹಿಸಲು ಇರಿಸಿಕೊಂಡು ನಂತರ ಯಾವುದೇ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರದಿದ್ದರೆ ಕಳುಹಿಸಲಾಗುತ್ತದೆ.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ರುದ್ರಮ್ಮ , ಕಾಲೇಜಿನ ಪ್ರಾಂಶುಪಾಲರಾದ ಕೋಟ್ಟರ, ಬಸಪ್ಪ, ವೈದ್ಯ ಅಧಿಕಾರಿಗಳಾದ ಚಂದ್ರ ಮೋಹನ್ , ಸಿಬ್ಬಂದಿಯ ವರ್ಗದವರು ಹಾಗೂ ಸದಸ್ಯರಾದ ಮಂಜುನಾಥ, ಶ್ರೀನಿವಾಸ ಇತರರು ಇದ್ದರು.
ದೇಶಾದ್ಯಂತ 15 ವರ್ಷದ ನಂತರದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದಾಗಿ ಕಳೆದ ಡಿಸೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಇನ್ನೊಂದೆಡೆ ಕೋವಿಡ್ ಮುಂಚೂಣಿ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ, ಆರೋಗ್ಯ ವಲಯ ಸೇವಕರಿಗೆ ಆರಂಭಿಕ ಹಂತದಲ್ಲಿ ಮೂರನೇ ಡೋಸ್ ನೀಡುವ ಕಾರ್ಯಕ್ರಮ ಜನವರಿ 10ರಿಂದ ಆರಂಭವಾಗಲಿದೆ.