ಮಸ್ಕಿ: ಇಂದು ಮಸ್ಕಿ ತಾಲೂಕಿನ ಯರಲಗಡ್ಡೆ ಶ್ರೀ ಆಂಜಿನೇಯ ಸ್ವಾಮಿ ಸಾನಿಧ್ಯದಲ್ಲಿ ಶ್ರೀ ಹನುಮಂತ ತಾತ ಪೂಜಾರಿರವರ ಅಮೃತ ಹಸ್ತದಿಂದ ಆ ರಹಸ್ಯ ಚಲನಚಿತ್ರ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಇನ್ನು ಇದೇ ಸಂದರ್ಭದಲ್ಲಿ ಚಲನಚಿತ್ರದಲ್ಲಿ ನಟಿಸಿರುವ ಗ್ರಾಮೀಣ ಪ್ರತಿಭೆಗಳಾದ ಶ್ರೀ ಶೇಖರಗೌಡ ಮಾಲಿಪಾಟೀಲ್ ಭೀಮಣ್ಣ ನಾಯಕ ಕಾಚಪುರ ಮತ್ತು ಗ್ರಾಮದ ಗುರು ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೊಸ ವರ್ಷ 2022ನ್ನು ಎಲ್ಲರೂ ಸಂತಸದಿಂದ ಬರ ಮಾಡಿ ಕೊಂಡಿದ್ದಾರೆ. ಹೊಸ ವರ್ಷ ಎಲ್ಲರಿಗೂ ಸಂತಸ ನೀಡಲಿ. ಎಲ್ಲರಿಗೂ ಶುಭವಾಗಲಿ ಎಂದು ಪೋಸ್ಟರ್ ಬಿಡುಗಡೆ ಬಂದಿದ್ದ ಪ್ರತಿಯೊಬ್ಬರು ಆಶಿಸಿದರು.