ಬೂಟು ಇಲ್ಲದಿದ್ದರು.. ಬರಿಗಾಲಲ್ಲೇ ಡಾಂಬರ್ ರಸ್ತೆಯಲ್ಲಿ ಓಟದ ಅಭ್ಯಾಸ ಮಾಡಿ ರಾಷ್ಟ್ರಮಟ್ಟಕ್ಕೆ ಜಿಗಿದ ಹಳ್ಳಿ ಪ್ರತಿಭೆ ಕಮಲಾಕ್ಷಿ.

ಮಸ್ಕಿ:  ತಾಲೂಕಿನ ತೀರ್ಥಬಾವಿ ನಾಯಕ ಸಮುದಾಯದ ಕೂಲಿ ಮಾಡುವ ಬಡ ಕುಟುಂಬವೊಂದು ಮಗಳು ಕಮಲಾಕ್ಷಿ  ಆಸೆಗೆ ಬೆನ್ನೆಲುಬಾಗಿದ್ದಾರೆ.  ತಂದೆ  ದ್ಯಾಮನಗೌಡ, ತಾಯಿ ನಾಗಮ್ಮ ಇಬ್ಬರೂ ಕೂಡ ಅನಕ್ಷರಸ್ಥರು ಬಡತನದ ನಡುವೆಯೇ ಮಗಳನ್ನು ಓದಿಸುತ್ತಿದ್ದಾರೆ.

ಈಕೆ ಶೂ ಇಲ್ಲದಿದ್ದರು ಅಸಾಯಕಳಾಗದೆ ಬರಿಗಾಲಲ್ಲೇ ಡಾಂಬರ್ ರಸ್ತೆಯಲ್ಲಿ ಓಟದ ಅಭ್ಯಾಸ ಮಾಡಿ, ಇದೀಗ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್‌ಗೆ ಆಯ್ಕೆಯಾದ ಛಲದಂಕೆ ಎಂದು ಹೇಳಬಹುದು. ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಮಲಾಕ್ಷಿ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಉದ್ದೇಶದಿಂದ 9ನೇ ತರಗತಿಯಿಂದಲೇ  ಓಟದ ಅಭ್ಯಾಸ ಮಾಡುತ್ತ ತಾಲೂಕು ಹಾಗೂ ಜಿಲ್ಲಾಮಟ್ಟದ ರನ್ನಿಂಗ್ ರೇಸ್‌ನಲ್ಲಿ ಭಾಗವಹಿಸಿ ವಿಜೇತರಾಗಿ , ಮುಂದೆ ರಾಜ್ಯ ಮಟ್ಟದಲ್ಲಿ ತಾನು ಚಾಂಪಿಯನ್ ಆಗಬೇಕೆಂಬ ಕನಸು ನನಸಾಗಿದೆ. ಅಕ್ಟೋಂಬರ್ ನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮೂವದರ ಜತೆಗೆ, ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ . 800 ಮೀಟರ್ ಓಟದಲ್ಲಿ ಪ್ರಥಮ, ಸ್ಥಾನ ಪಡೆದು ಚಾಂಪಿಯನ್ ಆಗಿ  ಜನವರಿಯಲ್ಲಿ ದೆಹಲಿ, ಆಗ್ರಾದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲಿದ್ದಾಳೆ.

ಕಮಲಾಕ್ಷಿ  ಕೇವಲ ಓಟದಲ್ಲಿ ಮಾತ್ರ ಸಾಧನೆ ಮಾಡಿಲ್ಲ, ಶೈಕ್ಷಣಿಕ ವಿಷಯದಲ್ಲಿ ಮುಂಚೂಣಿಯಲ್ಲಿದ್ದಾಳೆ. ಪದವಿ ಅಂತಿಮ ವರ್ಷ  ಓದುತ್ತಿದ್ದು , ಪದವಿ ದ್ವಿತೀಯ ವರ್ಷದಲ್ಲಿ ಶೇ. 88 ರಷ್ಟು  ಅಂಕಗಳಿಸಿ ಶಿಕ್ಷಣದಲ್ಲೂ ಸಾಧನೆ ಮಾಡಿದ್ದಾಳೆ .

ಬಡತನದಲ್ಲಿರುವ ಪ್ರತಿಭೆ ಕಮಲಾಕ್ಷಿ ಗೆ ಸಹಾಯ ಮಾಡುವವರು ಸಂಪರ್ಕಿಸಿ +91 99019 43021.

Discover more from Valmiki Mithra

Subscribe now to keep reading and get access to the full archive.

Continue reading