ಸಾಹಿತಿ – ಚಿಂತಕ ಆರ್. ಕೆ ಸುಬೇದಾರ್ ಅವರ ಬೀಳ್ಕೊಡುಗೆಯ ಅದ್ದೂರಿ ಸಮಾರಂಭ..!

ಕೊಪ್ಪಳ:  ಜಿಲ್ಲಾ ಕುಷ್ಟಗಿ ತಾಲೂಕು ಹಿರೇಮನ್ನಾಪುರ್ ಗ್ರಾಮದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ 35ವರ್ಷ ಸೇವೆಸಲ್ಲಿಸಿ ವಯೋನಿವೃತ್ತಿ ಹೊಂದಿದ ಸಾಹಿತಿ – ಚಿಂತಕ ಆರ್. ಕೆ ಸುಬೇದಾರ್ ಅವರ ಬೀಳ್ಕೊಡುಗೆ ಸಮಾರಂಭ ಅದ್ದೂರಿಯಾಗಿ ನೆರವೇರಿತು.

ಆರ್. ಕೆ ಸುಬೇದಾರ್ ಮಾತನಾಡುತ್ತಾ ಹಿರೇಮನ್ನಾಪುರ ಗ್ರಾಮದಲ್ಲಿ ಪ್ರೌಢಶಾಲೆಗೆ ಮೂರು ಎಕರೆ ಜಮೀನು ಪ್ರಾಥಮಿಕ ಶಾಲೆಗೆ ಒಂದು ಎಕರೆ ಜಮೀನು ದಾನ ಮಾಡಿದ ಸುಬೇದಾರ್ ಅವರ ಹೆಸರನ್ನು ನಾಮಫಲಕದ ಮೇಲೆ ಬರೆಯಲು ಸಂಕೋಚವೇಕೆ ಇಲ್ಲಿ ಜಾತೀಯತೆ ಮಾಡಲಾಗುತ್ತದೆ ಎಂದು ತಿಳಿಸಿದರು.

ದಾನ ಮಾಡಿದವರನ್ನು ಸ್ಮರಿಸುವುದು ಕರ್ತವ್ಯ ಕನಕಗಿರಿ ಸಂಸ್ಥಾನದ ಸುಬೇದಾರರು ವಂಶಸ್ಥರು ಈ ಗ್ರಾಮದಲ್ಲಿ ಭೂಮಿಯನ್ನು ಅಪಾರ ಪ್ರಮಾಣದಲ್ಲಿ ದಾನಮಾಡಿದ್ದಾರೆ. ಈ ಸಂಗತಿ ಎಲ್ಲರಿಗೂ ತಿಳಿಯಬೇಕು. 35ವರ್ಷ ಸೇವೆಸಲ್ಲಿಸಿದ ನನಗೆ ಇಲ್ಲಿನ ಜಾತಿಯತೆಯ ವಾತಾವರಣ ಹಿಡಿಸಲಿಲ್ಲ ಇಲ್ಲಿ ಎಲ್ಲರೂ ಸೌಹಾರ್ದದಿಂದ ಬಾಳಬೇಕಾದರೆ ಮೊದಲು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿರಿ, ಈ ಭಾಗದಲ್ಲಿ ಬೇಡ ಜನಾಂಗದ ದೊರೆಗಳು ಎಲ್ಲರನ್ನು ಸರಿ ಸಮಾನವಾಗಿ ಕಂಡವರು ಆದರೆ ಸಂಸ್ಥೆಯವರು ದಾನ ಮಾಡಿದವರನ್ನು ಮರೆಯುವುದಕ್ಕೆ ಎಂದು ಪ್ರಶ್ನೆ ಮಾಡಿದರು. ಈ ವಿದ್ಯಾಸಂಸ್ಥೆ ಉಳಿಸಿ ಬೆಳೆಸುವುದು ಊರಿನವರ ಕರ್ತವ್ಯ ಎಂದು ತಿಳಿಸಿದರು.

ಸಾಹಿತಿ ಈಟಿ ಅವರು ಮಾತನಾಡುತ್ತಾ ಸಾಹಿತಿ-ಚಿಂತಕ ಸುಬೇದಾರ್ ಕೊಡುಗೆ ಈ ಶಾಲೆಗೆ ಬಹಳ ಇದೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು. ಸುಬೇದಾರ್ ಸಾಹಿತಿಯಾಗಿ ಕೃತಿಗಳನ್ನು ಹೊರತಂದಿದ್ದಾರೆ. ರಾಷ್ಟ್ರ ಪ್ರಶಸ್ತಿಗೆ ಪಡೆದವರಾಗಿದ್ದಾರೆ. ಇವರ ಬೀಳ್ಕೊಡುಗೆ ವಾಲ್ಮೀಕಿ ನೌಕರರ ಸಂಘ ಕುಷ್ಟಗಿಯಲ್ಲಿ ಹಮ್ಮಿಕೊಳ್ಳಲಿ ಎಂದು ತಿಳಿಸಿದರು.

ವೀರಬಸಯ್ಯ ಕಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಎಸ್. ಜಿ ಕಡೆಮನಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷರಾದ ಶಿವನಗೌಡ ಪಾಟೀಲ. ಪಕೀರಪ್ಪ ದೇವರಮನೆ, ಕಳ ಕನಗೌಡ ಪಾಟೀಲ್ , ವಿ ಎಲ್ ಜಾಲಪುರ್. ರಮೇಶ್ ನಾಯಕ , ತುಳಸಿಗಿರಿ ನಾಯಕ. ಎಸ್ ಪಿ ಬಿಸಿಕಲ್. ಶಿವಾನಂದ ಹಿರೇಮಠ ವೀರಬಸಯ್ಯ ಕಾಡಗಿ ಸಂಗಪ್ಪ ಕಂಚಿ. ಬಸವರಾಜ ಹಿರೇಮಠ್. ಶರಣಪ್ಪ ಹರಿ ಜನ, ಸಂಸ್ಥೆಯ ದೇವಪ್ಪ ಗಂಗನಾಳ ಗವಿಸಿದ್ದಯ್ಯ ಬಸವರಾಜ್ ಉಪಸ್ಥಿತರಿದ್ದರು. ಕುಷ್ಟಗಿಯ ಕರಿ ಬಸಯ್ಯ ಮಹಾಸ್ವಾಮಿಗಳು ಸನ್ಮಾನಿಸಿ ಆಶೀರ್ವಚನ ನೀಡಿದರು.

Discover more from Valmiki Mithra

Subscribe now to keep reading and get access to the full archive.

Continue reading