ಬೆಂಗಳೂರು: ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ನಟ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಮುದ್ರಿಸುವ ಮೂಲಕ ಕೆಎಂಎಫ್ ಅಪ್ಪುಗೆ ವಿಶೇಷ ಗೌರವ ಸಲ್ಲಿಸಿದೆ.
ಹಲವು ಇಲಾಖೆಗಳ ರಾಯಭಾರಿಯಾಗಿದ್ದ ನಟ ಪುನೀತ್ ರಾಜ್ಕುಮಾರ್ ಅವರು ನಂದಿನಿ ಉತ್ಪನ್ನಗಳ ಜಾಹೀರಾತಿಗೆ ಬಿಡಿಗಾಸನ್ನೂ ಪಡೆದಿರಲಿಲ್ಲ. ಉಚಿತವಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡು ಕೆಎಂಎಫ್ ಉತ್ಪನ್ನಗಳಿಗೆ ಪ್ರಚಾರ ನೀಡಿ ಹಾಲು ಒಕ್ಕೂಟದ ರಾಯಭಾರಿಯಾಗಿ ರೈತಾಪಿ ಸಮೂಹದ ಮೆಚ್ಚುಗೆ ಗಳಿಸಿದ್ದರು.
ಕೆಎಂಎಫ್ ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಪ್ಪು, ಹಣ ಪಡೆಯುತ್ತಿರಲಿಲ್ಲ. ಅಪ್ಪು ನಿಧನ ಸುದ್ದಿ ಇಡೀ ಕರುನಾಡಿಗೆ ದೊಡ್ಡ ಆಘಾತವನ್ನೇ ತಂದೊಡ್ಡಿತ್ತು. ಅಪ್ಪು ನಮ್ಮನ್ನಗಲಿ 2 ತಿಂಗಳು ಕಳೆದರೂ ಆ ನೋವು ಇನ್ನೂ ಹಸಿಯಾಗೆ ಇದೆ. ಅಪ್ಪು ಅವರ ಕೋಟ್ಯಂತರ ಅಭಿಮಾನಿಗಳು ನೆಚ್ಚಿನ ನಟನ ಹೆಸರಲ್ಲಿ ವಿಭಿನ್ನ ಕಾರ್ಯಕ್ರಮ ನಡೆಸುತ್ತಲೇ ಇದ್ದಾರೆ. ಇದೀಗ ಕೆಎಂಎಫ್ ಹಾಲಿನ ಪ್ಯಾಕೆಟ್ನಲ್ಲಿ ಅಪ್ಪು ಭಾವಚಿತ್ರ ಮುದ್ರಿಸಿ ನಮನ ಸಲ್ಲಿಸಿರುವುದನ್ನು ಕಂಡ ನಾಡಿನ ಜನತೆ ಭಾವುಕರಾಗಿದ್ದಾರೆ.