ಗೋಶಾಲೆ ತ್ಯಾಜ್ಯದಿಂದ ಗ್ಯಾಸ್ ಉತ್ಪಾದನೆ : ಸಚಿವ ಪ್ರಭು ಚವ್ಹಾಣ್

ಗುಜರಾತ್: ಜಾಮನಗರದಲ್ಲಿರುವ ಸಿದ್ದಾರ್ಥ ವ್ಯಾಸ ಅವರ ಮ್ಯಾಕ್ಸಿಮ್ ಎನ್ವಿರಾನ್ಮೇಂಟಲ್ ಸಲ್ಯೂಷನ್ ಬಯೋ ಗ್ಯಾಸ್ ಘಟಕಕ್ಕೆ ಇಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಭೇಟಿ ನೀಡಿ ಚರ್ಚೆ ನಡೆಸಿದರು. ಗುಜರಾತ್ ನಗರದ ತ್ಯಾಜ್ಯವನ್ನು ಹಾಗೂ ಸಿದ್ದಾರ್ಥ ಗೋಶಾಲೆಯಲ್ಲಿನ ತ್ಯಾಜ್ಯವನ್ನು ಬಳಸಿಕೊಂಡು ಗ್ಯಾಸ್ ಉತ್ಪಾದಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ನಗರದ ತ್ಯಾಜ ಬಳಕೆ ಮಾಡಿಕೊಂಡು ಗ್ಯಾಸ್ ಉತ್ಪತ್ತಿ ಮಾಡುತ್ತಿರುವುದರಿಂದ ನಗರದಲ್ಲಿ ಕಸದ ವಿಲೇವಾರಿ ಸರಿಯಾಗಿ ಆಗುತ್ತಿರುವುದು ಗಮನಾರ್ಹ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಅಲ್ಲದೇ ಇಲ್ಲಿ ಉತ್ಪತ್ತಿಯಾಗುತ್ತಿರುವ ಗ್ಯಾಸ್ ಗುಜರಾತ್ ಗ್ರೀಡ್ ಗೆ ಸಹ ನೀಡುತ್ತಿರುವುದು ವಿಶೇಷ. ಜಾಮನಗರವನ್ನು ಸ್ವಚ್ಛವಾಗಿಸುವ ನಿಟ್ಟಿನಲ್ಲಿ ಸಿದ್ದಾರ್ಥ ವ್ಯಾಸ ಅವರ ಸಂಸ್ಥೆ ಬಹುದೊಡ್ಡ ಪಾತ್ರವಹಿಸಿದೆ ಅಲ್ಲದೆ ಕಸದ ವಿಲೇವಾರಿ ಸಹ ಸರಿಯಾದ ರೀತಿಯಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕಸದಿಂದ ರಸದ ಪರಿಕಲ್ಪನೆ ಅತ್ಯಂತ ಅಚ್ಚುಕಟ್ಟಾಗಿ ಇಲ್ಲಿ ಅನುಷ್ಟಾನವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ನಮ್ಮಲ್ಲಿಯೂ ಈ ತರಹದ ಪ್ರಯತ್ನಗಳು ಆದಲ್ಲಿ ರಾಜ್ಯವನ್ನು ಮತ್ತಷ್ಟು ಸ್ವಚ್ಛವನ್ನಾಗಿಸಬಹುದು ಅಲ್ಲದೇ ತ್ಯಾಜ್ಯದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಗೋ ಶಾಲೆಗಳಲ್ಲಿ ಗೋ ಆಧಾರಿತ ಕೃಷಿ ಮತ್ತು ಗೋ ಉತ್ಪನ್ನಗಳ ಉತ್ಪಾದನೆ ಗುಜರಾತ, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು ಸಂತಸ ತಂದಿದೆ. ನಮ್ಮ ರಾಜ್ಯದಲ್ಲಿ ಸಹ ಎಲ್ಲ ಗೋ ಶಾಲೆಗಳು ಆತ್ಮ ನಿರ್ಭರವಾಗಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಅನುಸರಿಸಲು ಉತ್ತೇಜನ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

Discover more from Valmiki Mithra

Subscribe now to keep reading and get access to the full archive.

Continue reading