ದಕ್ಷಿಣ ಆಫ್ರಿಕಾ: ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಕ್ವಿಂಟನ್ ಡಿಕಾಕ್ ದಿಢೀರ್ ಎಂದು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಭಾರತದ ವಿರುದ್ಧ ಸೆಂಚುರಿಯನ್ನ ಸೂಪರ್ಸ್ಪೋರ್ಟ್ಸ್ ಪಾರ್ಕ್ನಲ್ಲಿ ಇಂದು ಕೊನೆಗೊಂಡ ಮೊದಲ ಟೆಸ್ಟ್ ಪಂದ್ಯವನ್ನಾಡಿದ ಡಿ ಕಾಕ್ ಇದ್ದಕ್ಕಿದ್ದಂತೆ ಸದ್ಯದಿಂದಲೇ ಜಾರಿಗೆ ಬರುವಂತೆ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ನಿರ್ಧಾರ ಪ್ರಕಟಿಸುವ ವೇಳೆ ಮಾತನಾಡಿದ ಕ್ವಿಂಟನ್ ಡಿ ಕಾಕ್, ಈ ನಿರ್ಧಾರ ಅತ್ಯಂತ ಸುಲಭವಾಗಿ ತೆಗೆದುಕೊಂಡಿದ್ದಲ್ಲ. ಈ ಬಗ್ಗೆ ನಾನು ಸಾಕಷ್ಟು ಆಲೋಚನೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇದು ಪ್ರೋಟಿಯಾ ಆಗಿ ನನ್ನ ವೃತ್ತಿಜೀವನದ ಅಂತ್ಯವಲ್ಲ, ನಾನು ವೈಟ್ ಬಾಲ್ ಕ್ರಿಕೆಟ್ಗೆ ಸಂಪೂರ್ಣವಾಗಿ ಬದ್ಧನಾಗಿದ್ದೇನೆ ಮತ್ತು ನಿರೀಕ್ಷಿತ ಭವಿಷ್ಯಕ್ಕಾಗಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನನ್ನ ದೇಶವನ್ನು ಪ್ರತಿನಿಧಿಸುತ್ತೇನೆ. ಭಾರತದ ವಿರುದ್ಧದ ಈ ಟೆಸ್ಟ್ ಸರಣಿಯ ಉಳಿದ ಭಾಗದಲ್ಲಿ ನನ್ನ ಸಹ ಆಟಗಾರರಿಗೆ ಎಲ್ಲಾ ಶುಭಾಶಯಗಳು ತಿಳಿಸಲಿದ್ದೇನೆ” ಎಂದು ಅವರು ಹೇಳಿದರು.
29ರ ಹರೆಯದ ಡಿ ಕಾಕ್ ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಉದ್ದೇಶಿಸಿದ್ದಾರೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಮೂಲಕ ಭಾರತ ವಿರುದ್ಧ ಇಂದು ಕೊನೆಗೊಂಡ ಟೆಸ್ಟ್ ಪಂದ್ಯವೇ ಅವರ ಕೊನೆಯ ಟೆಸ್ಟ್ ಪಂದ್ಯವಾಗಿದೆ.
ಇದರಲ್ಲಿ ಡಿ ಕಾಕ್ ಏಳು ಕ್ಯಾಚ್ಗಳನ್ನು ತೆಗೆದುಕೊಳ್ಳುವ ಜೊತೆಗೆ ಎರಡು ಇನ್ನಿಂಗ್ಸ್ಗಳಲ್ಲಿ 34 ಮತ್ತು 21 ರನ್ ಗಳಿಸಿದರು. ಟೆಸ್ಟ್ ನಿವೃತ್ತಿಯನ್ನ ಸಾಕಷ್ಟು ಚಿಂತನೆ ಮಾಡಿ ತೆಗೆದುಕೊಂಡಿದ್ದೇನೆ. ಇನ್ಮುಂದೆ ನನ್ನ ಕುಟುಂಬಕ್ಕೆ ಸಮಯ ವಿನಿಯೋಗಿಸುತ್ತೇನೆ ಎಂದಿದ್ದಾರೆ.