ಹೈದರಾಬಾದ್: ‘ಶ್ಯಾಮ್ ಸಿಂಘಾ ರಾಯ್’ ಚಿತ್ರದಲ್ಲಿ ನಟನೆ ಮಾಡಿರುವ ನಟಿ ಸಾಯಿ ಪಲ್ಲವಿ ಖುದ್ದಾಗಿ ಸಿನಿಮಾ ಚಿತ್ರಮಂದಿರಕ್ಕೆ ತೆರಳಿ ಎಲ್ಲರ ಮಧ್ಯೆ ಕುಳಿತುಕೊಂಡು ಚಿತ್ರ ವೀಕ್ಷಣೆ ಮಾಡಿದ್ದಾರೆ.
ವಿಶೇಷವೆಂದರೆ ಬುರ್ಖಾ ಧರಿಸಿ ಹೈದರಾಬಾದ್ನ ಥಿಯೇಟರ್ನಲ್ಲಿ ಸಾಮಾನ್ಯರಂತೆ ಕುಳಿತುಕೊಂಡು ಸಿನಿಮಾ ನೋಡಿದ್ದಾರೆ. ಸಾಯಿ ಪಲ್ಲವಿ, ಬುರ್ಖಾ ಧರಿಸಿ ಸಿನಿಮಾ ನೋಡಲು ಹೋಗಿರುವ ವಿಡಿಯೊ ವೈರಲ್ ಆಗಿದೆ. ಚಿತ್ರಮಂದಿರದಲ್ಲಿ ಅಷ್ಟೊಂದು ಜನರು ತುಂಬಿದ್ದರೂ, ಯಾರೊಬ್ಬರೂ ಸಾಯಿ ಪಲ್ಲವಿ ಗುರುತು ಹಿಡಿದಿಲ್ಲ.
‘ಶ್ಯಾಮ್ ಸಿಂಹ ರಾಯ್’ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ನಾನಿ ದ್ವಿಪಾತ್ರದಲ್ಲಿ ನಟಿಸಿದ್ದರೆ, ರಾಹುಲ್ ಸಂಕೃತ್ಯನ್ ನಿರ್ದೇಶನದಲ್ಲಿ ಸಾಯಿ ಪಲ್ಲವಿ ‘ದೇವದಾಸಿ’ಯಾಗಿ ಕಾಣಿಸಿಕೊಂಡಿದ್ದಾರೆ.