ಹುಕ್ಕೇರಿ: ತಾಲೂಕಿನ ಕೋಣನಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೊನ್ನಿಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಉಪಚುನಾವಣೆ ನಡೆಸಲಾಗಿತ್ತು ಅದರಲ್ಲಿ ಶಬ್ಬೀರ ಬಾಬಾಸಾಹೇಬ ಮಕನಾದರ ಹಾಗೂ ಚಂದ್ರಕಾಂತ ಸೋಮೇಗೌಡ ಮಾಯಣ್ಣವರ ಸ್ಪರ್ದಿಗಳು ಇದ್ದರು. ಅದರಲ್ಲಿ ಶಬ್ಬೀರ ಬಾಬಾಸಾಹೇಬ ಮಕನದಾರ ಬಹುಮತಗಳಿಂದ ಆರಿಸಿ ಬಂದಿರುತ್ತಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಭ್ಯರ್ಥಿ ಬಾಬಾಸಾಹೇಬ ನೂರಪಾಶ ಪಟೇಲ್ ಇವರ ಆಶೀರ್ವಾದದಿಂದ ಹಾಗೂ ಹೊನ್ನಿಹಳ್ಳಿ ಗ್ರಾಮದ ಜನತೆ ನನ್ನ ಮೇಲೆ ಇಟ್ಟಿರುವ ಭರವಸೆ ಹಾಗೂ ಊರಿನ ಸಮಸ್ತ ಜನರು ಆಶೀರ್ವಾದ ಮಾಡಿ ನನ್ನನ್ನು ಬಹುಮತಗಳಿಂದ ಆರಿಸಿದ್ದಾರೆ. ಇನ್ನೂ ಇದೇ ವೇಳೆ ಊರಿನ ಮುಖಂಡರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.