ಹುಕ್ಕೇರಿ: ತಾಲೂಕಿನ ಕೋಣನಕೇರಿ ಗ್ರಾಮ ಪಂಚಾಯತಿಯಲ್ಲಿ ಮಿಷನ್ ಅಂತ್ಯೋದಯ ಗ್ರಾಮೀಣ ಬಡತನ ನಿವಾರಣೆ ನಿರ್ಮೂಲನಾ ಯೋಜನೆ ಹಾಗೂ ಜನರ ಯೋಜನೆ ಮತ್ತು ಜನರ ಅಭಿವೃದ್ಧಿ ಮುಖಾಮುಖಿ ಸಭೆ ಬುಧವಾರ ನಡೆಸಲಾಯಿತು.
ಈ ಸಭೆಯಲ್ಲಿ ಗ್ರಾಮ ಸದಸ್ಯರಾದ ಶಿದ್ದಪ್ಪ ಢಂಗ, ಶಂಕರ ಖಾನಪ್ಪಗೊಳ ಹಾಗೂ ಊರಿನ ಮುಖಂಡರಾದ ಭೂಪಾಲ ಸಾಳುಂಕೆ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಮತ್ತು ಕೋಣನಕೇರಿ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಇನ್ನು ಈ ಯೋಜನೆಯನ್ನು ಗ್ರಾಮಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮಿಷನ್ ಅಂತ್ಯೋದಯ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಪ್ರಥಮ ಹಂತದಲ್ಲಿ ಜಿಲ್ಲೆಯ 19 ಗ್ರಾ.ಪಂ.ಗಳು ಆಯ್ಕೆಯಾಗಿದ್ದು, ಈ ಗ್ರಾ.ಪಂ.ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ಸೋಲಾರ್ ದೀಪ, ಅಂಗನವಾಡಿ ಶಾಲೆಗಳು, ಆರೋಗ್ಯ ಕೇಂದ್ರ, ಅಂಚೆ ಕಚೇರಿ, ಘನತ್ಯಾಜ್ಯ ವಿಲೇವಾರಿ ಘಟಕ, ವಿದ್ಯುತ್ ಸಂಪರ್ಕ, ಅಡುಗೆ ಅನಿಲ ಸಂಪರ್ಕ, ಬ್ಯಾಂಕ್ ಮತ್ತಿತರ ಸೌಲಭ್ಯಗಳು ಇವೆಯೇ ಎಂಬುದರ ಬಗ್ಗೆ ಗ್ರಾಮಸಭೆಯಲ್ಲಿ ಚರ್ಚಿಸಿ ಸಮಗ್ರ ಮಾಹಿತಿ ಸಂಗ್ರಹಿಸಿ ಕ್ರಿಯಾಯೋಜನೆ ಒದಗಿಸುವುದು ಇದರ ಮುಖ್ಯ ಯೋಜನೆಯಾಗಿದೆ.