ಕೊತ್ತಿಗುಡ್ಡ: ಡಾ. ರಾಜವಂಶದ ಯುವರಾಜ್ಕುಮಾರ್ ಅವರ ಅಭಿಮಾನಿಗಳ ಬಳಗವನ್ನು ದೇವದುರ್ಗ ತಾಲೂಕಿನ ಕೊತ್ತಿಗುಡ್ಡ ಎಂಬ ಗ್ರಾಮದಲ್ಲಿ ನೂತನವಾಗಿ ಸೋಮವಾರ ಸ್ಥಾಪನೆ ಮಾಡಲಾಯಿತು.
ಈ ಸಂದರ್ಭದಲ್ಲಿ ರೂಪ ಶ್ರೀನಿವಾಸ್ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಉದ್ಘಾಟನೆ ಮಾಡಿದರು. ಅಪ್ಪು ಅಜಾರಮರ ಅವರ ಬಗ್ಗೆ ಎಷ್ಟು ಹೇಳಿದರೂ ಸಮಯ ಸಾಲದು ಎಂದು ಹೇಳುವ ಮೂಲಕ ಅಪ್ಪುವಿಗೆ ಗೌರವ ನಮನವನ್ನು ಸಲ್ಲಿಸಿದರು.
ಈ ವೇಳೆಯಲ್ಲಿ ಮರಿಲಿಂಗ. ಪಾಟೀಲ್ ರಂಗಪ್ಪ ತಾಲೂಕ ಅಧ್ಯಕ್ಷರು, ಶರನಗೌಡ, ಹನುಮಂತರಯ್ಯ ಕೊತ್ತದೊಡ್ಡಿ, ಯಲ್ಲನಗೌಡ ಮತ್ತು ಪವರ್ ಸ್ಟಾರ್ ಪುನೀತ್ ಅಭಿಮಾನಿಗಳ ಬಳಗ ಮತ್ತು ಊರಿನ ಗುರುಹಿರಿಯರ ಸಮ್ಮುಖದಲ್ಲಿ ಸ್ಥಾಪನೆ ಮಾಡಲಾಯಿತು.