ತುರುವಿಹಾಳ: 58 ನಗರ ಸ್ಥಳೀಯ ಸಂಸ್ಥೆಗಳು ಹಾಗೂ ನಾನಾ ಕಾರಣಗಳಿಂದ ತೆರವಾಗಿರುವ ಸಾವಿರ 264 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಸೋಮವಾರ ಮತದಾನ ನಡೆಯುತ್ತೀದೆ.
2019ರಲ್ಲಿ ಅವಧಿ ಪೂರ್ಣಗೊಂಡ ಹಾಗೂ 2021 ನೇ ಸಾಲಿನಲ್ಲಿ ಅವಧಿ ಮುಕ್ತವಾಗಿರುವ 51 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. 5 ನಗರಸಭೆ 19 ಪುರಸಭೆ 34 ಪಟ್ಟಣ ಪಂಚಾಯಿತಿಯ 1185 ವಾರ್ಡ್ ಗಳಿಗೆ ಮತದಾನ ನಡೆಯಲಿದೆ.
ಇಂದು ನೆಡೆದ ತುರುವಿಹಾಳ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ವಾರ್ಡ್ 6 ರಲ್ಲಿ ಜನಪ್ರಿಯ ಮಸ್ಕಿ ಶಾಸಕರು ಶ್ರೀ ಆರ್ ಬಸನಗೌಡ ತುರುವಿಹಾಳರವರು ಮತ ಚಲಾವಣೆ ಮಾಡಿದರು.