ಹಾವೇರಿ: ಅಖಿಲ ಕರ್ನಾಟಕ ವಾಲ್ಮೀಕಿ ಮಹಸಭಾ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ರಾಣೆಬೆನ್ನೂರು ನಗರದಲ್ಲಿ ಇಂದು ತಾಲೂಕಿನ ವಾಲ್ಮೀಕಿನಾಯಕ ಮಹಾಸಭಾವತಿಯಿಂದ ಸಮಾಜದ ನಗರಸಭೆ, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರುಗಳಿಗೆ ಸನ್ಮಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಗಣ್ಯರು ನಿರ್ಧೇಶಕರು ಮತ್ತು ಗೌರವಾನ್ವಿತ ನ್ಯಾಯಾದೀಶರು,ಡಾಕ್ಟರೇಟ್ ಪದವಿದರರು,ಸೈನಿಕರು,ಪ್ರಗತಿಪರ ರೈತರು,ಕ್ರೀಡಾಪಟುಗಳು,ಪತ್ರಕರ್ತರು,ಸೈನಿಕರು,ಮಾಜಿ ಸೈನಿಕರು, ವೈಧ್ಯರುಗಳು,ಸರ್ಕಾರಿ ನೌಕರರ ಸಂಘದ ಪಧಾದಿಕಾರಿಗಳು ಹಾಗೂ ಸಮಾಜದ ಗಣ್ಯರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಕೆ.ಪಿ.ಸಿ.ಸಿ ಎಸ್ ಟಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಪ್ರಕಾಶ ಹಾದಿಮನಿ ಅವರು ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಐ.ಪಿ.ಎಸ್.ಅಧಿಕಾರಿ ರವಿ ಡಿ. ಚೆನ್ನಣ್ಣವರ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಮಾಜದ ವಿಧ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಮಾರ್ಗದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಾಲ್ಮೀಕಿನಾಯಕ ಸಮಾಜದ ಹಿರಿಯರು ಭಾಗವಹಿಸಿದ್ದರು.