ತುಮಕೂರು: ಪ್ರಖರ ವಾಗ್ಮಿ, ಕವಿ ಮತ್ತು ರಾಜಕಾರಣಿ ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 97ನೇ ಹುಟ್ಟುಹಬ್ಬವನ್ನು ಶನಿವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ಸರ್ಕಾರದ ಕಾನೂನು ಸಚಿವರಾದ ಮಾಧುಸ್ವಾಮಿ, ತುಮಕೂರಿನ ಶಾಸಕರಾದಂತಹ ಜಿ. ಬಿ ಜ್ಯೋತಿ ಗಣೇಶ್ ಹಾಗೂ ರಾಜ್ಯ ಉಪಾಧ್ಯಕ್ಷರಾದ ಎಂ.ಬಿ ನಂದೀಶ್ ರವರು ಸಹ ಪ್ರಭಾರಿ ಲಕ್ಷ್ಮೀಶ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಕೆಸಿಡಿಸಿ ನಿರ್ದೇಶಕರಾದ ಟಿ. ಆರ್ ಸದಾಶಿವಯ್ಯ ಭಾಗವಹಿಸಿದ್ದರು.