ಕೊರೊನಾ ವೈರಸ್ ಏಕಾಏಕಿ ಜನರಲ್ಲಿ ಆತಂಕಕಾರಿಯಾಗಿ ಕಾಡುತ್ತಿರುವ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿದ್ದು, ಪ್ರಸ್ತುತ ವಿಶ್ವದ ಯಾವುದೇ ಭಾಗವೂ ಸುರಕ್ಷಿತವಲ್ಲ ಎನ್ನುವ ಸ್ಥಿತಿ ನಿರ್ಮಿಸಿಬಿಟ್ಟಿದೆ.
ಎರಡನೇ ಅಲೆ ಮುಗಿಯಿತು ಅನ್ನುವಂತೆ ಯೋಚಿಸುವಾಗ ಮೂರನೇ ಅಲೇಯ ಭೀತಿ ಶುರುವಾಗಿದೆ. ಆದರೆ ದಯಮಾಡಿ ಭಯ, ಆತಂಕ ಬೇಡ, ಹಾಗಂತ ನಿರ್ಲಕ್ಷತನ ಕೊಡಬೇಡ, ಕೊರೋನಾ ಎಂಬ ಮಹಾಮಾರಿ ಪ್ರತಿಬಾರಿ ರೂಪಾಂತರಗೊಂಡು ಪ್ರಭಾವ ಬೀರುತ್ತಲೇ ಇದೆ. ಜನರನ್ನು ಭಯ ಪಡಿಸುತ್ತಲೇ ಇದೆ.ಅದು ಎಷ್ಟು ರೂಪಾಂತರಗೊಳ್ಳುತ್ತದೆ ಅಷ್ಟೇ ಬೇಕಾ ಆಕ್ರಮಿಸುತ್ತದೆ ಹಾಗೂ ಉಸಿರಾಟದ ಸಂಬಂಧಿತ ಶ್ವಾಶಕೋಶ ಸಂಬಂಧಿಸಿದ ತೊಂದರೆಗಳು ಅಷ್ಟೇ ವೇಗವಾಗಿ ಕಾಣಿಸಿಕೊಳ್ಳುತ್ತವೆ. ಅದಕ್ಕೆ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಅವಶ್ಯಕ.
ಕೊರೊನಾವೈರಸ್ ಏಕಾಏಕಿ ಮಾನವ ಜನಾಂಗದ ಮೇಲೆ ದೈಹಿಕವಾಗಿ ಪರಿಣಾಮ ಬೀರಿಲ್ಲ ಆದರೆ ಆಳವಾದ ಮಾನಸಿಕ ಹೊರೆ ಬೀರಿದೆ. ಸಮಯ ಮಾತ್ರ ನಿಜವಾದ ಪರಿಣಾಮವನ್ನು ತಿಳಿಸುತ್ತದೆ ಮತ್ತುಅದನ್ನು ನಿರ್ವಹಿಸಲು ನಾವು ಸಿದ್ಧರಾಗಿರಬೇಕು. ಸೂಕ್ತವಾದ ಪ್ರೋಟೋಕಾಲ್ಗಳು ಮತ್ತು ಸಲಹೆಗಳನ್ನು ಅನುಸರಿಸುವುದರಿಂದ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಸಹಾಯ ಮಾಡುತ್ತದೆ.
ಆಗಾದರೆ ಕೊರನಾದಿಂದ ನಾವು ತಪ್ಪಿಸಿಕೊಳ್ಳಲು ಏನು ಮಾಡಬೇಕು..?
1. ಸರ್ಕಾರ ಈಗಾಗಲೇ ಹೇಳಿದಂತೆ ಮೊದಲು ಎಲ್ಲರೂ ಚುಚ್ಚುಮದ್ದನ್ನು ಪಡೆಯಲೇಬೇಕು. ಒಂದನೆಯದು ಆಗಿದ್ದರೆ ಎರಡನೇ ಚುಚ್ಚುಮದ್ದು ಅನ್ನು ತಪ್ಪದೇ ಹಾಕಿಸಿಕೊಳ್ಳಬೇಕು.
2. ವಯಸ್ಸಾದವರಿಗೆ ಕೊರನಾದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು.
3. ಎಲ್ಲಕ್ಕಿಂತ ಮೊದಲು ಸಾಮಾಜಿಕ ಅಂತರವನ್ನು ಫಲಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
4. ಆದಷ್ಟು ಮಾನಸಿಕವಾಗಿ ಮತ್ತು ದೈಹಿಕವಾಗಿ ಯೋಗಾಸನ ಮಾಡಬೇಕು
5. ಕೆಮ್ಮು, ಕಫ ಜ್ವರ, ತರಹ ಲಕ್ಷಣಗಳು ಕಂಡುಬಂದರೆ ಕೂಡಲೇ ಹತ್ತಿರದ ವೈದ್ಯರ ಹತ್ತಿರ ಹೋಗಿ ಚಿಕಿತ್ಸೆ ಪಡೆಯಬೇಕು.
6. ಅಲ್ಪ ಲಕ್ಷಣಗಳು ಕಂಡು ಬಂದ ನಂತರ ಚಿಕಿತ್ಸೆ ಪಡೆದು ಶ್ವಾಸಕೋಶ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕು.
7. ಆಹಾರ ಮತ್ತು ವಿಹಾರ ಅಷ್ಟೇ ಮಹತ್ವದ್ದು. ಸಾಧ್ಯವಾದಷ್ಟು ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುವುದು. ತರಕಾರಿ ತುಂಬಾ ಒಳ್ಳೆಯದು.
ಬಹುಮುಖ್ಯವಾಗಿ ಯಾರು ಯಾರು ಚುಚ್ಚುಮದ್ದು ಪಡೆಯದೆ ಇನ್ನು ಇರುವವರು ನಿರ್ಲಕ್ಷಿಸದೆ ಚುಚ್ಚುಮದ್ದು ಪಡೆಯಬೇಕು. ಬಹುತೇಕವಾಗಿ ಮೊದಲ ಮತ್ತು ಎರಡನೆಯ ಅಲೆಯಿಂದ ಸಾಕಷ್ಟು ಸಮಸ್ಯೆಗಳು ಅನುಭವಿಸಿದ್ದು. ಅಷ್ಟೇ ಅಲ್ಲದೆ ಅನುಭವಿಸುತ್ತಾ ಇದ್ದೇವೆ ಜೊತೆಗೆ ಬಹಳಷ್ಟು ಕಲಿತಿದ್ದೇವೆ. ಕಲಿತಿರುವ ಪಾಠ ವ್ಯರ್ಥವಾಗಬಾರದು. ಭಯವನ್ನು ಹೋಗಲಾಡಿಸಿ. ಆರೋಗ್ಯದ ಸಮತೋಲನದ ಸೂಕ್ತ ಮಾಹಿತಿಯನ್ನು ಪಡೆಯಬೇಕು.