ನಾಯಕನಹಟ್ಟಿ: ಆರೋಗ್ಯ ಸಚಿವರಾದ ಶ್ರೀ ಬಿ. ಶ್ರೀರಾಮುಲು ರವರು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಚುನಾವಣೆ ಅಂಗವಾಗಿ ವಾರ್ಡ್ ನಂ. 15 ಮತ್ತು 16 ನೇ ವಾರ್ಡ್ ಗೆ ಭೇಟಿನೀಡಿ ಅಭ್ಯರ್ಥಿಗಳ ಪರವಾಗಿ ಶುಕ್ರವಾರ ಪ್ರಚಾರ ನಡೆಸಿದರು,
ಇನ್ನೂ ಇದೇ ವೇಳೆ ಅಭ್ಯರ್ಥಿಗಳಿಗೆ ಗೆಲುವಿನ ಉಡುಗೊರೆ ನೀಡಲು ಕೋರಿದರು.ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಅಭ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯ 16 ವಾರ್ಡ್‌ಗಳಿಗೆ ಡಿ.27ರಂದು ಚುನಾವಣೆ ನಿಗದಿಯಾಗಿದ್ದು, ಚುನಾವಣಾ ಕಣದಲ್ಲಿ ಅಂತಿಮವಾಗಿ 47 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.ಒಟ್ಟು 16 ವಾರ್ಡ್‌ಗಳಲ್ಲಿ ಬಿಜೆಪಿಯಿಂದ 15, ಕಾಂಗ್ರೆಸ್‌ನಿಂದ 15, ಜೆಡಿಎಸ್‌ನಿಂದ 4, ಬಿಎಸ್‌ಪಿಯಿಂದ 2 ಮತ್ತು ಪಕ್ಷೇತರರಾಗಿ 11 ಮಂದಿ ಕಣದಲ್ಲಿದ್ದಾರೆ. ಒಂದನೇ ವಾರ್ಡ್‌ನಲ್ಲಿ ಗ್ರಾಮಸ್ಥರು ಯಾವುದೇ ಪಕ್ಷವನ್ನು ಬೆಂಬಲಿಸಬಾರದು ಎಂದು ನಿರ್ಧರಿಸಿ ದುರುಗಪ್ಪ ಎಂಬ ವ್ಯಕ್ತಿಯನ್ನು ಪಕ್ಷೇತರ ಎಂದು ನಿರ್ಧರಿಸಿ ಅವಿರೋಧವಾಗಿ ಆಯ್ಕೆ ಮಾಡಿದ್ದರು.
ಆದರೆ, ಅದೇ ಗ್ರಾಮದ ಎಂ.ಟಿ. ಮಂಜುನಾಥ ಅವರು ಕೊನೆ ಕ್ಷಣದಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರಿಂದ ಆ ವಾರ್ಡ್‌ನಲ್ಲಿ ಚುನಾವಣೆ ನಿಗದಿಯಾಗಿದೆ. ಆದಕಾರಣ ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿಲ್ಲ.