ಮೈಸೂರು: ಹತ್ತನೇ ತರಗತಿ (10)ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು ಮತ್ತು 5 ಸಾವಿರ ಹಣವನ್ನು ಪ್ರೋತ್ಸಾಹ ಧನವಾಗಿ ಮಕ್ಕಳಿಗೆ ನೀಡಲಾಯಿತು.
ಶುಕ್ರವಾರ ಚಾಮುಂಡಿಬೆಟ್ಟದ ಶ್ರೀ ಮಹಾಬಲಾದ್ರೀ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ ನಡೆಸಿ ಸಂಘದ ಹಿರಿಯ ಸದಸ್ಯರಿಗೆ ಹಾಗೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನ ಮಾಡಲಾಯಿತು.
ಇದರ ಅಧ್ಯಕ್ಷರು ಶ್ರೀ ಮಹಾಬಲಾದ್ರೀ ವಿವಿಧೋದ್ದೇಶ ಸಹಕಾರ ಸಂಘ ಶ್ರೀಧರ್ ನಾಯಕ, ಇನ್ನೂ ಸಭೆಯಲ್ಲಿ ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳು, ಕಾರ್ಯದರ್ಶಿ ಹಾಗೂ ಸದಸ್ಯರು ಭಾಗವಹಿಸಿದ್ದರು.