ಚಳ್ಳಕೆರೆ: ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟ ಪುಂಡರ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ ಚಳ್ಳಕೆರೆ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಮುಖಾಂತರ ಎಂಇಎಸ್ ನಿಷೇಧಿಸಲು ಬಸವರಾಜ್ ಬೊಮ್ಮಯಿಗೆ ಮನವಿ ಮಾಡಿದ್ದರೆ.
ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಭಗ್ನಗೊಳಿಸಿದ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜವನ್ನು ಸುಟ್ಟು ಹಾಕಿರುವ ಎಂಇಎಸ್ ಕಾರ್ಯಕರ್ತರ ವಿರುದ್ದ ಉಗ್ರ ಕಾನೂನು ಕ್ರಮ ಜರಿಗಿಸಲು ಮತ್ತು ಎಂಇಎಸ್ ಸಂಘಟನೆಯನ್ನು ಕರ್ನಾಟಕ ದಲ್ಲಿ ನಿಷೇಧಿಸಲು ಅಗ್ರಹಿಸಿ ಪ್ರತಿಭಟನೆ ಮಾಡಿದರು.
ಈ ಸಂಧರ್ಭದಲ್ಲಿ ವಾಲ್ಮೀಕಿ ಮಹಿಳಾ ಸಂಘಟನೆ ಅಧ್ಯಕ್ಷೆಯಾದ ಶ್ರೀಮತಿ ಸುಮಂಗಳಮ್ಮ, ಮಾಜಿ ಅಧ್ಯಕ್ಷೆಯಾದ ಶ್ರೀಮತಿ ಟಿ. ಜೆ. ಸ್ವಪ್ನ, ಶ್ರೀಮತಿ ಸೌಭಾಗ್ಯ, ಕರವೇ ಚಳ್ಳಕೆರೆ ತಾಲ್ಲೂಕು ಮಹಿಳಾ ಅಧ್ಯಕ್ಷೆರಾದ ಶ್ರೀಮತಿ ಜಯಲಕ್ಷ್ಮಿ, ಮೊಳಕಾಲ್ಮುರು ಕರವೇ ಮಹಿಳಾ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಕವಿತ, ಶ್ರೀಮತಿ ಯಶೋಧಮ್ಮ, ಶ್ರೀಮತಿ ರೂಪಶ್ರೀ ,ರಶ್ಮಿ ಉಪಸ್ಥಿತರಿದ್ದರು.