ರಾಯಚೂರು: ದಲಿತ ವ್ಯಕ್ತಿಗಳದ ಹನುಮಂತ ಭಿಮಪ್ಪ ಕಿಸ್ತಿ ಮತ್ತು ಅಮರೇಶ ಚಲವಾದಿ ಅವರಿಗೆ ನಿಮಗೆ ಗ್ರಾಮ ಪಂಚಾಯಿತಿಯಲ್ಲಿ ಖಾಯಂ ಉದ್ಯೋಗ ನೀಡುವುದಾಗಿ ಸುಳ್ಳು ಭರವಸೆ ನೀಡುತ್ತಾ ಮೇಲುಜಾತಿಯ ಗ್ರಾಮ ಪಂಚಾಯಿತಿಯ ಸದಸ್ಯರಾದ ವಿದೇಶತಂ ಅಮರಣ್ಣ ಎನ್ನುವ ವ್ಯಕ್ತಿ ಸುಮಾರು 2015 ರಿಂದ ಸುಳ್ಳು ಹೇಳುತ್ತೀರುವ ಪ್ರಕರಣ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಪಲಕನಮರಡಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ವಂದಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲದೇ ಪಲಕನಮರಡಿ ಗ್ರಾಮ ಪಂಚಾಯಿತಿಯ ಹಳ್ಳಿಗಳಲ್ಲಿ ಯಾವುದೇ ಸುರಕ್ಷತೆಯ ಕ್ರಮವಹಿಸದೆ ಚರಂಡಿ ಹೂಳೆತ್ತುವ ಕೆಲಸಕ್ಕೆ ದುರ್ಬಳಕೆಯ ಮಾಡಿಕೊಂಡು ಪಂಚಾಯಿತಿಯಿಂದ ಬರುವ ಹಣವನ್ನು ತಾನೇ ತಿನ್ನುವುದು ಅಲ್ಲದೇ ಇವರಿಗೆ ಹಣ ನೀಡದೆ ಸತಾಯಿಸುತಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇತನ ವಿರುದ್ಧ ದಲಿತರ ದುರ್ಬಳಕೆಯ ಕಾನೂನಿನ ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ದಲಿತ ವ್ಯಕ್ತಿಗೆ ನ್ಯಾಯಾ ಕೊಡಿಸಬೇಕಾಗಿ ವಿನಂತಿ.