ತುಮಕೂರಿನ ಶಟ್ಟಿಹಳ್ಳಿ ಸೀಲ್ ಡೌನ್ – 4 ಓಮಿಕ್ರಾನ್ ಪ್ರಕರಣ ಪತ್ತೆ..ಜನರಲ್ಲಿ ಹೆಚ್ಚಿದ ಆತಂಕ..!

ತುಮಕೂರು: ವಿಶ್ವದಲ್ಲಿ ಮೂರನೇ ಅಲೆಯ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್‍ನ ಹೊಸ ರೂಪಾಂತರಿ ಓಮಿಕ್ರಾನ್  ತುಮಕೂರಿಗೂ ಕಾಲಿಟ್ಟಿದ್ದು 2ರಿಂದ 4 ಜನರಲ್ಲಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಶಟ್ಟಿಹಳ್ಳಿ ರಾಘವೇಂದ್ರ ಮಠದ ಎದುರುಗಡೆ ಇರುವಂತಹ ಏರಿಯಾದಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದ್ದು, ಅಧಿಕಾರಿಗಳು ಈಗಾಗಲೇ ಆ ನಗರವನ್ನು ಸೀಲ್ ಡೌನ್ ಮಾಡಲು ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ ಆದರೆ ಈ ಕುರಿತು ಆರೋಗ್ಯ ಇಲಾಖೆ ಅಧಿಕೃತವಾಗಿ ಖಚಿತ ಮಾಹಿತಿ ನೀಡಬೇಕಾಷ್ಟೇ ,

ಕೊರೊನಾದಿಂದ ತತ್ತರಿಸಿದ ತುಮಕೂರು ಈಗತಾನೇ ಚೇತರಿಸಿಕೊಳ್ಳುತ್ತಿದೆ.ಆದರೆ ಈ ಮಧ್ಯೆ ಓಮಿಕ್ರಾನ್ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಶುರುವಾಗಿದೆ.

Discover more from Valmiki Mithra

Subscribe now to keep reading and get access to the full archive.

Continue reading