ಚಿಕ್ಕೋಡಿ: ಲೈಂಗಿಕ ಕಿರುಕುಳ ವಿರುದ್ಧ ಮಹಿಳೆಯರು ಜಾಗೃತಿಯಿಂದ ಇರುವುದು ಅನಿವಾರ್ಯ ಎಂದು ಮಹಿಳಾ ಜಾಗೃತಿ ಬಗ್ಗೆ ಹಿರಿಯ ನ್ಯಾಯವಾದಿಗಳಾದ ಶ್ರೀಮತಿ ವೈಜುಷಾ ಅಡಿಕೆ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಬಸವಪ್ರಭು ಕೋರೆ ಪದವಿ ಮಹಾವಿದ್ಯಾಲಯ ಘಟಕದ ವತಿಯಿಂದ ಆಯೋಜಿಸಲಾಗಿದ್ದ ತಾಂತ್ರಿಕ “ಮಾಹಿತಿ ಕಾಯ್ದೆ 2000” ಎಂಬ ವಿಶೇಷ ಕಾರ್ಯಾಗಾರದಲ್ಲಿ ಬುಧವಾರ ಮಾತನಾಡಿದ ಅವರು, ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಶೋಷಣೆ ಹಾಗೂ ಅಂತರ್ಜಾಲದ ವಿವಿಧ ಅಪ್ಲಿಕೇಶನ್ ಗಳಲ್ಲಿ ಮಹಿಳೆಯರಿಗೆ ಆಗುತ್ತಿರುವ ವಂಚನೆ ಕುರಿತು ತಿಳಿಸಿದರು.
ಸದ್ಯ ಲೈಂಗಿಕ ಕಿರುಕುಳದ ವಿರುದ್ಧ ಹೋರಾಡುವ ಮನೋಭಾವನೆಯನ್ನು ಮಹಿಳೆಯರು ಬೆಳೆಸಿಕೊಳ್ಳುವುದು ಅನಿವಾರ್ಯವಾಗಿದೆ.’ ಹಾಗೂ ಕಾನೂನಿನಲ್ಲಿ ಮಹಿಳೆಯರಿಗೆ ಆಡಳಿತ ಸಮಾನತೆ, ಮಹಿಳಾ ಜೀವನ ಮತ್ತು ಸ್ಥಾನಬದ್ಧತೆ, ರಕ್ಷಣೆ, ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರದ ಬಗ್ಗೆ ಹೇಗೆ ಜಾಗೃತವಾಗಿರಬೇಕು ಎಂದು ಇದೇ ವೇಳೆ ವೈಜುಷಾ ಅಡಿಕೆ ನುಡಿದರು.
ಇನ್ನೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಕೆ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಯು.ಕೆ ರಜಪೂತ್ ರವರು ಮಾತನಾಡಿ, ಅಂತರ್ಜಾಲದ ವಿವಿಧ ಅಪ್ಲಿಕೇಶನ್ ಗಳಲ್ಲಿ ಮಹಿಳೆಯರು ಚಾಣಕ್ಯತನ ತೋರಿ ವಂಚನೆ ಆಗದಿರಲು ಕಾಳಜಿ ವಹಿಸಬೇಕು ಹಾಗೂ ತಮ್ಮ ರಕ್ಷಣಾ ಮನೋಭಾವಗಳನ್ನು ಬೆಳೆಸಿಕೊಳ್ಳುವುದು ಸೂಕ್ತ ಎಂದು ವಿದ್ಯಾರ್ಥಿನಿಯರಿಗೆ ಸಲಹೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಎಸ್. ಆಯ್. ಪುರಾಣಿಕ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಡಾ. ಎಸ್ಎಸ್ ಮಾದರ್ ಅವರು ನಡೆಸಿಕೊಟ್ಟರು.