ಜನರ ಕಷ್ಟಗಳನ್ನು ಕೇಳುವವರ್ಯಾರು? ಭಾಷಣ, ಧರಣಿ ನಿಲ್ಲಿಸಿ, ಸಮಸ್ಯೆಗಳು ಚರ್ಚೆಮಾಡಿ – ಸಚಿವ ಮಾಧುಸ್ವಾಮಿ

ಬೆಳಗಾವಿ: , ಅಧಿವೇಶನಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗಬೇಕಿದೆ. ಹೊರಗಡೆ ಹತ್ತಾರು ಸಂಘಟನೆಗಳು ಸಮಸ್ಯೆಯನ್ನು ಹೊತ್ತು ಹೋರಾಟ ಮಾಡುತ್ತಿವೆ. ಅವರ ನೋವನ್ನು ಆಲಿಸಬೇಕಿದೆ ಎಂದು ಸಚಿವ ಮಾಧುಸ್ವಾಮಿ ಬುಧವಾರ ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು, ದಕ್ಷಿಣ ಭಾಗದ ನೀರಿನ ಸಮಸ್ಯೆ, ಉತ್ತರ ಕರ್ನಾಟಕ ನೀರಿನ ಸಮಸ್ಯೆ ಬಗೆಹರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ, ಈ ಅಧಿವೇಶನ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗಿದೆ. ಜನರ ಕಷ್ಟಗಳನ್ನು ಕೇಳುವವರ್ಯಾರು ಎಂದು ಸ್ವಪಕ್ಷಕ್ಕೆ ಪ್ರಶ್ನಿಸಿದರು. ಭಾಷಣ, ಧರಣಿ ನಿಲ್ಲಿಸಿ, ಸಮಸ್ಯೆಗಳು ಚರ್ಚೆಮಾಡಿ ಎಂದು ಮಾಧುಸ್ವಾಮಿ ಸಲಹೆ ನೀಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಮಾಜಿ ಸಚಿವ ಕೃಷ್ಣಬೈರೆಗೌಡ ಮಾತನಾಡಿ, ನಾವು ಯಾತಕ್ಕಾಗಿ ಬಂದಿದ್ದೆವೆ ಎಂಬುವುದು ಪ್ರಶ್ನೆಯಾಗಿದೆ ಎಂದರು. ಅತಿವೃಷ್ಟಿಯುಂಟಾಗಿ ಎರಡು ವರ್ಷಗಳಿಂದ ಇಲ್ಲಿನ ಜನರು ಕಷ್ಟಗಳನ್ನು ಅನುಭವಿಸುತ್ತಾರೆ. ನಿರಂತರ ಮಳೆಯಿಂದ ಬೆಳೆಗಳು ನಾಶವಾಗಿವೆ, ಇಲ್ಲಿವರೆಗೂ ಪರಿಹಾರ ಸಿಕ್ಕಿಲ್ಲ, ಕೊರೋನಾದಲ್ಲಿ ನಲುಗಿದ ಸಾರ್ವಜನಿಕರಿಗೆ ಸರ್ಕಾರ ಧನಸಹಾಯ ಮಾಡಿಲ್ಲ. ಇವುಗಳು ಮುಖ್ಯವಾಗಿ ಚರ್ಚೆಯಾಗಬೇಕಿದೆ, ಹೀಗಾಗಿ ನಿಮ್ಮ ಹಾರಾಟ-ಚಿರಾಟ ನಿಲ್ಲಿಸಿ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಇನ್ನೂ ಸಮಸ್ಯೆಗಳ ಪರಿಹಾರಕ್ಕಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ಬೆಳಗಾವಿ ಅಧಿವೇಶನ 8ನೇ ದಿನಕ್ಕೆ ಕಾಲಿಟ್ಟಿದೆ ಆದರೆ , ಒಂದು ದಿನವೂ ಸಹ ಉತ್ತರ ಕರ್ನಾಟಕ ಸಮಸ್ಯೆಗಳು ಸದನದಲ್ಲಿ ಚರ್ಚೆ ಆಗುತ್ತಿಲ್ಲವೆಂಬ ನೋವನ್ನು ಬಿಜೆಪಿ ನಾಯಕರು ಸ್ಪೀಕರ್ ಎದುರುಗಡೆ ಹೇಳಿಕೊಂಡಿದ್ದಾರೆ.
ಅಧಿವೇಶನ ಕೇವಲ ಭಾಷಣಕ್ಕೆ ಸಿಮೀತವಾಗಿದೆ ಎಂದು ಇಲ್ಲಿನ ಜನರ ಪ್ರಶ್ನೆಯಾಗಿದೆ. ಸರ್ಕಾರ ನೇರ ಉತ್ತರ ನೀಡಬೇಕಿದೆ. ಈ ಅಧಿವೇಶನದಿಂದ ನನಗೆ ನಾಚಿಕೆಯುಂಟಾಗುತ್ತಿದೆ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಇದೇ ಸಮಯದಲ್ಲಿ ಕಳವಳ ವ್ಯಕ್ತಪಡಿದ್ದಾರೆ.

Discover more from Valmiki Mithra

Subscribe now to keep reading and get access to the full archive.

Continue reading