ಬೆಂಗಳೂರು: ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಧ್ವಂಸಗೊಳಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಶಿವಸೇನೆ ಕಾರ್ಯಕರ್ತರ ಕೃತ್ಯ ಖಂಡಿಸಿ ವಿಜಯ ಸೇನೆವತಿಯಿಂದ ಕರ್ನಾಟಕದಲ್ಲಿ ಎಂಇಎಸ್ ಹಾಗೂ ಶಿವಸೇನೆಯನ್ನು ನಿಷೇಧಿಸಬೇಕೆಂದು ಬೃಹತ್ ಪ್ರತಿಭಟನೆ ಮಾಡಲಾಗುತ್ತೀದೆ.
ಇದರ ನೇತೃತ್ವವನ್ನು ವಿಜಯ ಸೇನೆಯ ಸಂಸ್ಥಾಪಕ ಹಾಗೂ ರಾಜ್ಯ ಅಧ್ಯಕ್ಷರಾದ ಶ್ರೀಯುತ ಹೆಚ್ .ಎನ್. ದೀಪಕ್ ವಹಿಸಿಕೊಂಡಿದ್ದು, ಎಂ ಇ ಎಸ್ ಶಿವಸೇನೆ ಪುಂಡರ ಕೃತ್ಯವನ್ನು ಖಂಡಿಸಿ ಮೈಸೂರು ಬ್ಯಾಂಕ್ ವೃತ್ತದಿಂದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಹತ್ತಿರವಿರುವ ಸಂಗೊಳ್ಳಿ ರಾಯಣ್ಣ ಪುತ್ತಳಿವರೆವಿಗೂ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆ ಮುಖಾಂತರ ಬೃಹತ್ ಹೋರಾಟ ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಪದಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆಯ ಪದಾಧಿಕಾರಿಗಳು, ಮಹೇಶ್, ಸಚಿವನಂದಾ ಆರ್, ಸಂದೀಪ್ ಜಿ ಪಿ, ಪುರುಷೋತ್ತಮ್ ಗೆಳೆಯರ ಬಳಗ, ಅನಿಲ್ ಅಂಬಿಕಾ, ಮೋಹನ್ ದೀಕ್ಷಿತ್ ,ಹರೀಶ್ ಎ ಜಿ, ಜಗದೀಶ್ ಜಗ್ಗಿ, ಸುಧಾಕರ್ ರಾವ್ , ಸುಧಾಕರ್ ನಾಗರಾಜ್ ಜಿಮ್ ,ವೀರೇಶ್ ಸಿ.ಪಿ ಶೆಟ್ಟಿ ಭಾಗವಹಿಸಿದ್ದರು.