ಕಕ್ಕೇರಾ: ಡಿಸೆಂಬರ್. 27 ರಂದು ನಡೆಯುವ ಪುರಸಭೆ ಚುನಾವಣೆಯ ಪ್ರಚಾರದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು. ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಬಿರುಸಿನ ಪ್ರಚಾರ ನಡೆಯುತ್ತೀದೆ.
ಈ ಮಧ್ಯೆ ಕಕ್ಕೇರಾದಲ್ಲಿ ಪುರಸಭೆ ಚುನಾವಣೆ ನಿಮಿತ್ತ ಮಂಜಲಪುರ್ ವಾರ್ಡ್ ನಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿಯನ್ನು ತೊರೆದು ರಾಜಾ ವೆಂಕಟಪ್ಪ ನಾಯಕ್ ನೇತೃತ್ವದಲ್ಲಿ ಬುಧವಾರ ಕಾಂಗ್ರೆಸ್ ಸೇರ್ಪಡೆಯಾದರು.
ಕಕ್ಕೇರಾ ಪುರಸಭೆ ಚುನಾವಣೆಯ ಉಮೇದುವಾರಿಕೆ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ಪುರಸಭೆ ಕಚೇರಿ ಎದುರು ವಿವಿಧ ಪಕ್ಷಗಳ ಕಾರ್ಯಕರ್ತರು ಕೂಡ ಜಮಾಯಿಸಿದ್ದರು.