ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ತಾಲ್ಲೂಕು ನಾಯಕರ ಸಂಘ ಮತ್ತು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ವತಿಯಿಂದ
1) ಪ.ಪಂಗಡಕ್ಕೆ 7.5% ಮೀಸಲಾತಿ ನೀಡಲು ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಗೊಳಿಸಬೇಕು
.
2) ಮೈಸೂರು ಭಾಗದಲ್ಲಿ ನಾಯಕ ಸಮಾಜದ ಪರ್ಯಾಯ ಪದ ಪರಿವಾರ ಎಸ್ಟಿ ಗೆ ಸೇರಿದ್ದರು 2008 ರಿಂದ 2021ರ ವರೆಗೆ ದೂರು ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು.
3) ಸಿಂದುತ್ವ ಪ್ರಮಾಣ ಪತ್ರವನ್ನು ಪಡೆಯಲು ಅರ್ಜಿ ಸಲ್ಲಿಸಿರುವ ಎಲ್ಲಾ ನಾಯಕ ಸಮಾಜದವರಿಗೂ ತಕ್ಷಣವೇ ಸಿಂದುತ್ವ ನೀಡಬೇಕು.
4) ಬೆಳಗಾವಿಯಲ್ಲಿ ವಿಧಾನ ಸಭೆ ಕಲಾಪ ಸಂದರ್ಭದಲ್ಲಿ ಪ.ಪಂ ಕ್ಕೆ 7.5% ಮೀಸಲಾಗಿ ಹೆಚ್ಚಳ ಮಾಡುವಂತೆ ಒತ್ತಾಯಿಸಿ ವಾಲ್ಮೀಕಿ ನಾಯಕ ಸಮಾಜದ ಸಮಾನ ಮನಸ್ಕ ಹೋರಾಟಗಾರರು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಸಂಘಟನೆ ಮುಖಂಡರು, ಮಹಿಳಾ ಹೋರಾಟಗಾರರ ಮೇಲೆ ಪೊಲೀಸ್ ಲಾಠಿ ಚಾರ್ಜ್ ಮತ್ತು ಪೊಲೀಸ್ ದುರ್ವರ್ತನೆ ಮಾಡಿರುವುದನ್ನು ಖಂಡಿಸಲಾಯಿತು.
5) ನಂಜನಗೂಡುನಲ್ಲಿ ನಡೆದ ವಾಲ್ಮೀಕಿ ಜಯಂತಿ ಆಚರಣೆ ಸಮಯದಲ್ಲಿ ನಡೆದ ಗಲಾಟೆಯಲ್ಲಿ ಅಮಾಯಕ ವಿಧ್ಯಾರ್ಥಿಗಳು, ಮುಖಂಡರ ಮೇಲೆ ದಾಖಲಾಗಿರುವ ದೂರನ್ನು ವಾಪಸ್ಸು ಪಡೆಯಬೇಕು.
6) ನಂಜನಗೂಡು ನಗರದಲ್ಲಿ ವಾಲ್ಮೀಕಿ ಪುತ್ಥಳಿ ನಿರ್ಮಾಣ ಮಾಡಬೇಕು ಮತ್ತು ಆ ವೃತ್ತಕ್ಕೆ ವಾಲ್ಮೀಕಿ ವೃತ್ತ ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರಕ್ಕೆ ತಹಶಿಲ್ದಾರರ ಮೂಲಕ ಹಕ್ಕೊತ್ತಾಯ ಪತ್ರವನ್ನು ಕಳುಹಿಸಲಾಯಿತು.
ಈ ಪ್ರತಿಭಟನೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ *ಎಸ್.ಸಿ.ಬಸವರಾಜು ಅವರು ,ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷರಾದ *ದೇವರಾಜ್ ಟಿ ಕಾಟೂರು ಅವರು,ಜಿಲ್ಲಾಧ್ಯಕ್ಷರಾದ ಉದ್ಬೂರು ಎಂ.ಸೋಮಣ್ಣ ಅವರು,ತಾಲ್ಲೂಕು ಅಧ್ಯಕ್ಷರಾದ ಹೆಡತಲೆ ಶಿವಕುಮಾರ್ ಅವರು,ನಂಜನಗೂಡು ತಾಲ್ಲೂಕು ನಾಯಕರ ಸಂಘದ ಅಧ್ಯಕ್ಷರಾದ ನಾಗರಾಜು ಅವರು ,ರೈತ ಮುಖಂಡರಾದ ಬಂಗಾರನಾಯಕ ಅವರು,ಹೆಡತಲೆ ದೊರೆಸ್ವಾಮಿ ಅವರು,,ಆನಂದ್,ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ವಿದ್ಯಾ ಸಾಗರ್ ಅವರು,ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಸತೀಶ್ ರಾವ್,ಪ.ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀನಿವಾಸ್, ಕುರಹಟ್ಟಿ ಅರುಣ್,ಗಣೇಶ್ ,ಸುತ್ತೂರು ಮಹದೇವನಾಯಕರು,ಕೌಲಂದೆ ಶಂಕರನಾಯಕರು,ಹೆಡತಲೆ ರಂಗಸ್ವಾಮಿ ಅವರು,ಸಿಂಧುವಳ್ಳಿ ಮಹದೇವನಾಯಕ ,ರಘು ಅರುಣ್,ಬಾಲು,ಆನಂದ್,ಸೂರಹಳ್ಳಿ ಲಕ್ಷ್ಮಣ್,ಮಂಜು,ಹೆಡತಲೆ ಮಹೇಶ್,ಉದ್ಬೂರು ಗೋವಿಂದ ಇನ್ನೂ ಮುಂತಾದವರು ಭಾಗವಹಿಸಿದ್ದರು.
ದೇವರಾಜ್ ಟಿ ಕಾಟೂರು