ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಪಲಕನಮರಡಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಸೇಡಂ ಇವರ ಸಹಯೋಗದಲ್ಲಿ ನಿರುದ್ಯೋಗಿ ಯುವತಿಯರಿಗೆ ಉಚಿತ ಹೊಲಿಗೆ ತರಬೇತಿ ಕೇಂದ್ರ ಆರಂಭ ಮಾಡಲಾಯಿತು. ಈ ಸಂದರ್ಭದಲ್ಲಿ ತರಬೇತಿಯ ಮುಖ್ಯಸ್ಥರಾದ ಶ್ರೀ ಮತಿ ಈರಮ್ಮ ಗಂ ರಮೇಶ ಹಾಗೂ ತರಬೇತಿ ಶಿಬಿರಾರ್ಥಿಗಳಾದ ಅವ್ವಮ್ಮ ಮಲ್ಲಾಪುರ, ಪಾರ್ವತಮ್ಮ, ಶಾಂತಮ್ಮ, ಅಂಜಮ್ಮ ಇತರರು ಭಾಗವಹಿಸಿದ್ದರು.