ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಹೋಬಳಿಯ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ಸಿಗಾಗಿ ಪರದಾಟ ಸಿದ್ದಾಪುರ ಹೋಬಳಿಯ ಸುತ್ತಮುತ್ತಲಿನ ಹಳ್ಳಿಗಳಿಂದ ಗಂಗಾವತಿ, ಕಾರಟಗಿ, ಸಿಂಧನೂರು ,ನಗರಗಳಿಗೆ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ಬಸ್ಸಿಗಾಗಿ ಪರದಾಟದಾಡುತಿದ್ದು

ಕಾಲೇಜಿಗೆ ಹೋಗಲು ಸರಿಯಾದ ಸಮಯಕ್ಕೆ ಬಸ್ಸುಗಳು ಸಿಗುತ್ತಿಲ್ಲ ರಾಯಚೂರು ಸಿಂಧನೂರು ದಿಂದ ಬರುವ ಬಸ್ಸುಗಳು ತುಂಬಿಕೊಂಡು ಬಂದಿರುತ್ತಾವೆ ಆದ್ದರಿಂದ ವಿದ್ಯಾರ್ಥಿ ಗಳಿಗೆ ಸಾರ್ವಜನಿಕರಿಗೆ ಜಾಗವಿರುವುದಿಲ್ಲ ಈ ರೀತಿಯಾದರೆ ವಿದ್ಯಾರ್ಥಿಗಳಿಗೆ ಅವರವರ ಕಾಲೇಜುಗಳ ತಲುಪುವ ಹೊತ್ತಿಗೆ ಸಮಯವಾಗಿರುತ್ತದೆ ಅಲ್ಲಿನ ಪಾಠಗಳು ಅರ್ಧ ಮುಗಿದು ಹೋಗಿರುತ್ತವೆ , ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ
ವರದಿ:ಅಂಬಣ್ಣ ನಾಯಕ