ಹುಕ್ಕೇರಿ ತಾಲೂಕ್ಕಿನ ಹೊನ್ನಿಹಳ್ಳಿ ಗ್ರಾಮದ ಸಂಜು ಪಾಟೀಲ ಎಂಬುವರ ಜಮೀನಿನಿಂದ ಭರಮಪ್ಪ ನಾಯಿಕ ಇವರ ಜಮೀನಿನ ವರಗೆ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಲು ಅನುದಾನ ಮಂಜೂರಾಗಿದ್ದು ಕೆಲಸ ಮಾಡದೇ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಹಣವನ್ನು ಮೂಜೂರು ಮಾಡಿಸಿ ದುರುಪಯೋಗ ಮಾಡಿರುವುದಾಗಿ ಹೊನ್ನಿಹಳ್ಳಿ ಗ್ರಾಮದ ವಾಲ್ಮೀಕಿ ಸಮುದಾಯದ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇಲ್ಲಿನ ಸಮುದಾಯ ಜನರೆಲ್ಲರೂ ರೈತರೇ ಆಗಿದ್ದು, ಅವರ ಕೆಲಸ ಕಾರ್ಯಗಳಿಗೆ ತೊಂದರೆ ಆಗತಿದೆ, ಹಲವು ಬಾರಿ ಗ್ರಾಮಸ್ಥರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ.. ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲಾ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಹೊನ್ನಿಹಳ್ಳಿ ಗ್ರಾಮದ ವಾಲ್ಮೀಕಿ ಸಮುದಾಯದ ಮುಖಂಡರಾದ ಸಂಜು ಪಾಟೀಲ್, ರಮೇಶ್ ನಾಯಿಕ, ಮಹೇಂದ್ರ ನಾಯಿಕ, ಬಸವರಾಜ್ ಪಾಟೀಲ್, ಸುಭಾಷ್ ನಾಯಿಕ, ಸುರೇಶ ನಾಯಿಕ, ಅಜಿತ್ ನಾಯಿಕ, ಅಪ್ಪಾಸಾಹೇಬ್ ನಾಯಿಕ, ಉಮೇಶ್ ನಾಯಿಕ ಮುಂತಾದವರು ಉಪಸ್ಥಿತರಿದ್ದರು.