ಇಂದು ದೇವಾಲಯಗಳ ನಗರದಲ್ಲಿ ರಾಯಚೂರು- ಕೊಪ್ಪಳ ಸ್ಥಳೀಯ ಸಂಸ್ಥೆ ಚುನಾವಣೆ ನಿಮಿತ್ಯವಾಗಿ
ಕನಕಗಿರಿ ಪಟ್ಟಣದಲ್ಲಿ ವಿಧಾನ ಪರಿಷತ್ ಚುನಾವಣೆಯ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಜನಸಾಗರ ಹರಿದು ಬಂದಿತ್ತು
ಭಾ.ಜ.ಪ. ಅಭ್ಯರ್ಥಿಯಾದ ವಿಶ್ವನಾಥ ಬನಹಟ್ಟಿ ಪರವಾಗಿ ಮತ ಯಾಚನೆ ಮಾಡಲು ರಾಜ್ಯ ಸರ್ಕಾರದ ಸಚಿವರುಗಳು, ರಾಯಚೂರು- ಕೊಪ್ಪಳ ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರುಗಳು, ಪಕ್ಷದ ಪದಾಧಿಕಾರಿಗಳು, ಮುಖಂಡರುಗಳು ಹಾಗೂ ಇನ್ನೀತರರು .
ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ-ಸದಸ್ಯರುಗಳು, ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತ ಬಂಧುಗಳು ಆಗಮಿಸಿದ್ದರು, ಈ ಕಾರ್ಯಕ್ರಮದಲ್ಲಿ ತೆಂಗಿನ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಲಾಯಿತು,
ಕನಕಗಿರಿ ಕ್ಷೇತ್ರ ಜನಪ್ರಿಯ ಶಾಸಕರು ದಡೇಸುಗೂರು ಬಸವರಾಜ್ ಅವರು ಕನಕಗಿರಿ ನಗರದಲ್ಲಿ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದರು ಬಿಜೆಪಿ ಪಕ್ಷದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು,
ವರದಿ: ಮಂಜುನಾಥ ಆಕಳಕುಂಪಿ