ಲಿಂಗಸುಗೂರು: ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಪರಿಶಿಷ್ಟ ಜಾತಿಯ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ನಿರ್ಲಕ್ಷ ತೋರಿದ ಪೊಲೀಸರನ್ನು ಅಮಾನತುಗೊಳಿಸಬೇಕೆಂದು ದಲಿತರ ಮತ್ತು ಜನಪರ ಸಂಘಟನೆಗಳು ಸೋಮವಾರ ಪ್ರತಿಭಟನೆಯನ್ನು ನಡೆಸಿದರು.
ತಾಲ್ಲೂಕಿನ ಮುದುಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಕಿಲ್ಲಾರಹಟ್ಟಿಯಲ್ಲಿ ನಡೆದ ಪರಿಶಿಷ್ಟ ಜಾತಿಯವರ ಮೇಲೆ ನಡೆದ ದೌರ್ಜನ್ಯದ ಕಡೆ ಪೊಲೀಸರು ನಿರ್ಲಕ್ಷ ತೋರಿಸಿದ ಪ್ರಕರಣಕ್ಕೆ ದಲಿತ ಮತ್ತು ಜನಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆಯನ್ನು ನಡೆಸಿದರು.
ಕಿಲ್ಲಾರಹಟ್ಟಿಯಲ್ಲಿ ಕಳೆದ ಒಂದು ವರ್ಷದಿಂದ ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯಗಳು ಜರುಗುತ್ತಲೇ ಇದೆ, ಎಲ್ಲಾ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ ಅವರನ್ನು ಮೇಲೆ ದೂರು ದಾಖಲಾಗಬೇಕು ಹಾಗೂ ಎಲ್ಲಾ ಪ್ರಕಾರಣಗಳಲ್ಲಿಯೂ ನಿರ್ಲಕ್ಷ ತೋರಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು ಎಂದು ಒತ್ತಾಯಿಸಿದರು.
ಕಿಲ್ಲಾರಹಟ್ಟಿ ಪ್ರಕರಣದ ಸಂತ್ರಸ್ತೆಯ ಕುಟುಂಬಸ್ಥರಿಗೆ ಶಾಸನ ಬದ್ಧ ಪರಿಹಾರವನ್ನು ನೀಡಿ ಆಕೆಯನ್ನು ಕುಟುಂಬದವರಿಗೆ ರಕ್ಷಣೆಯನ್ನು ನೀಡಬೇಕು. ಅಸ್ಪೃಶ್ಯತೆ, ಅಸಮಾನತೆ, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶವನ್ನು ನೀಡದಂತಹ ಹೀನ ಕೃತ್ಯಗಳು ನಡೆಯುತ್ತಲೇ ಇದೆ ಅವುಗಳಿಗೆ ಕಡಿವಾಣ ಹಾಕಬೇಕು ಎಂದು ತಹಶೀಲ್ದಾರ್ ಶಾಲಂಸಾಬ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮುಖಂಡ ಬಾಲಸ್ವಾಮಿ ಕೊಡ್ಲಿ, ದೊಡ್ಡಪ್ಪ ಮಸ್ಕಿ, ದಾನಪ್ಪ ಮಸ್ಕಿ, ಚಿನ್ನಪ್ಪ ಕೊಟ್ರಿಕಿ, ಎಚ್.ಎಂ ಬಡಿಗೇರ, ಅಂಬಣ್ಣ ಅರೋಲಿ, ಹನುಮಂತಪ್ಪ ಕುಣಿಕೆಲ್ಲೂರು, ಹನುಮಂತಪ್ಪ ವೆಂಕಟಾಪುರ, ಮಲ್ಲಯ್ಯ ಬಳ್ಳಾ, ಬಸವರಾಜ ಸಾಸಲಮರಿ, ಅನಿಲಕುಮಾರ, ಕುಪ್ಪಣ್ಣ ಹೊಸಮನಿ, ಪ್ರಭುಲಿಂಗ ಮೇಗಳಮನಿ, ಲಿಂಗಪ್ಪ ಪರಂಗಿ, ಚಿನ್ನಪ್ಪ ಕಂದಳ್ಳಿ, ಮಲ್ಲನಗೌಡ ರಾಂಪುರ, ದುರುಗಪ್ಪ ಅಗ್ರಹಾರ, ನಾಗಪ್ಪ ಈಚನಾಳ, ರಮೇಶ ಗೋಸ್ಲೆ, ಯಂಕಪ್ಪ ಚಿತ್ತಾಪುರ, ಉಮೇಶ ಹುನಕುಂಟಿ, ಯಲ್ಲಾಲಿಂಗ, ತಿಪ್ಪರಾಜ, ಹುಲಗಪ್ಪ ಕೆಸರಹಟ್ಟಿ ಮುಂತಾದವರು ಪಾಲ್ಗೊಂಡಿದ್ದರು.