ಗದಗ ಡಿಸೆಂಬರ್ 2: ಜಿಲ್ಲೆಯಲ್ಲಿ ಡಿಸೆಂಬರ್-1 ರಿಂದ 7 ರ ವರೆಗೆ ಬೆಳೆ ವಿಮೆ ಸಪ್ತಾಹವನ್ನು ಆಚರಣೆ ಮಾಡಲಾಗುತ್ತಿದೆ. ಕಡಲೆ (ನೀರಾವರಿ), ಗೋಧಿ (ವiಳೆ ಆಶ್ರಿತ) & (ನೀರಾವರಿ) ಬೆಳೆಗೆ 16-12-2021 ಕೊನೆಯ ದಿನಾಂಕವಾಗಿದ್ದು, ರೈತ ಬಾಂಧವರು ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ತಿಳಿಸಿದರು.
2021-22 ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ವಿಮೆ ಸಪ್ತಾಹದ ಆಚರಣೆ ಅಂಗವಾಗಿ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಬೆಳೆಹಾನಿ ಆಗಿರುವ ಪ್ರದೇಶಗಳಲ್ಲಿ ಬೆಳೆ ವಿಮಾ ಯೋಜನೆಯಡಿ ನೋಂದಾಯಿಸಿದ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ (ಕೆಆರ್‌ಎಸ್ -ಪಿಎಂಎಫ್ ಬಿವೈ)ಮಾರ್ಗಸೂಚಿ ಅನುಸಾರ ಶೇಂಗಾ ಮತ್ತು ಈರುಳ್ಳಿ ಬೆಳೆಗಳನ್ನು ಕಟಾವು ಮಾಡಿರುವ ರೈತರು ಪೋಸ್ಟ್ ಹಾರ್ವೆಸ್ಟ್ ಲಾಸಸ್ ಅಡಿ ಮತ್ತು ಕಟಾವು ಮಾಡದೇ ಇರುವ ರೈತರು ಲಾಸಸ್ ಅಂಡರ್ ಲೋಕಲೈಸಡ್ ಇನಿಷಿಯೇಷನ್ಸ್ ಅಡಿ, ಹಾಗೂ ಹತ್ತಿ ಮತ್ತು ಮೆಣಸಿನಕಾಯಿ ಬೆಳೆಗಳನ್ನು ಸ್ಥಳೀಯ ಗಂಡಾAತರ (ಲಾಸಸ್ ಅಂಡರ್ ಲೋಕಲೈಸಡ್ ಇನಿಷಿಯೇಷನ್ಸ್ ) ಅಡಿ ಅರ್ಜಿ ಸಲ್ಲಿಸಲು ಗೂಗಲ್ ಪ್ಲೇ ಸ್ಟೋರ್ ನಿಂದ ಬಜಾಜ್ ಅಲಾಯನ್ಸ್ ಸಂಸ್ಥೆಯ ಫಾರ್ಮಿತ್ರಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅರ್ಜಿಯನ್ನು ಅಪ್ ಲೋಡ್ ಮಾಡಬೇಕೆಂದರು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬAಧಿಸಿದ ವಿಮಾ ಸಂಸ್ಥೆಯ ಗದಗ ಶಾಖೆಯನ್ನು ಸಂಪರ್ಕಿಸಬೇಕೆAದು ಅವರು ತಿಳಿಸಿದರು.
ಸದರಿ ಸಂದರ್ಭದಲ್ಲಿ ಪ್ರಭಾರ ಜಂಟಿ ಕೃಷಿ ನಿರ್ದೇಶಕರಾದ ವಿರೇಶ ಹುನಗುಂದ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು, ಬಜಾಜ್ ಜನರಲ್ ಇನ್ಸೂö್ಯರನ್ಸ್ ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದರು.