ಸುರಪುರ: ಬಿಜೆಪಿ ಪ್ರಚಾರ ಸಭೆ

ಸುರಪುರ: ಭಾರತೀಯ ಜನತಾ ಪಾರ್ಟಿ ಸುರಪುರ ಮಂಡಲದ ವತಿಯಿಂದ ಕಲಬುರಗಿ ವಿಧಾನ ಪರಿಷತ್ ಅಭ್ಯರ್ಥಿಯಾದ ಮಾನ್ಯ ಶ್ರೀ ಬಿ.ಜಿ. ಪಾಟೀಲ್ ರವರ ಚುನಾವಣಾ ಪ್ರಚಾರ ಸಭೆಯನ್ನು ಹಮ್ಮಿಕೊಳ್ಳಗಿತ್ತು.

ಈ ಕಾರ್ಯಕ್ರಮವನ್ನು ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಮಾನ್ಯ ಶ್ರೀ ನರಸಿಂಹ ನಾಯಕ ರಾಜುಗೌಡ್ರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವಿಧಾನ ಪರಿಷತ್ ಅಭ್ಯರ್ಥಿಯಾದ ಮಾನ್ಯ ಶ್ರೀ ಬಿ. ಜಿ. ಪಾಟೀಲ್ ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ರಾಜ ಹನುಮಪ್ಪ ನಾಯಕ ತಾತ ಮಾಜಿ ಜಿ. ಪಂ ಅಧ್ಯಕ್ಷರು, ಶ್ರೀ ಮರೀಲಿಂಗಪ್ಪ ನಾಯಕ ಕರ್ನಾಳ, ಶ್ರೀ ಮತಿ ಸುಜಾತ ವೇಣುಗೋಪಾಲ್ ಜೇವರ್ಗಿ ನಗರ ಸಭೆ ಅಧ್ಯಕ್ಷರು ಸುರಪುರ ಶ್ರೀ ಸುರೇಶ ಆರ್. ಸಜ್ಜನ್, ಶ್ರೀ ಕಿಶೋರ್ ಚಂದ್ ಜೈನ್, ಶ್ರೀ ದೊಡ್ಡ ದೇಸಾಯಿ ದೇವರಗೋನಾಲ, ಶ್ರೀ ಯಲ್ಲಪ್ಪ ಕುರುಕುಂದಿ ಇವರೆಲ್ಲರೂ ಕಾರ್ಯಕ್ರಮದ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯುವ ಮೋರ್ಚಾಗಳ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಗ್ರಾಮ ಪಂ. ಸದಸ್ಯರುಗಳು, ಹಲವಾರು ಬಿ. ಜೆ. ಪಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ವರದಿ : ಸಿಂಧೂರ ಪಾಟೀಲ್.

Discover more from Valmiki Mithra

Subscribe now to keep reading and get access to the full archive.

Continue reading