ಸುರಪುರ ತಾಲೂಕಿನ ಕಕ್ಕೇರಿ ಪುರಸಭಾ ವ್ಯಾಪ್ತಿಯಲ್ಲಿರುವ 15 ನೇ ವಾರ್ಡಿನ ಅಂಬಾ ನಗರದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ,ಕಟ್ಟಿ ಸುಮಾರು 15 ವರ್ಷ ವಾದರೂ ಪಕ್ಕದಲ್ಲಿರುವ ಸುಮಾರು ಹದಿನೈದು ಅಡಿ ಆಳವಾದ ತೆಗ್ಗು ಮತ್ತು 6 ಅಡಿ ನಿಂತಿರುವ ನೀರು ಗಟಾರದೊಂದಿಗೆ ಮಕ್ಕಳು ಮತ್ತು ಶಿಕ್ಷಕರು ತಮ್ಮ ಜೀವ ಕೈಯಲ್ಲಿಡಿದು ಶಿಕ್ಷಣ ಕಲಿಯಬೇಕಗಿದೆ ಇದು ದೊಡ್ಡ ದುರ್ದೈವ ಕರ ಸಂಗತಿ
ಅಂಬಾ ನಗರದ ಜನರು ಮತ್ತು ಶಿಕ್ಷಕರು ಸೇರಿ ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಇಲ್ಲಿಯವರೆಗೆ ಯಾವ ಅಧಿಕಾರಿಯಾಗಲಿ ಜನಪ್ರತಿನಿಧಿಗಳಾಗಲಿ ಸುಮಾರು ಹದಿನೈದು ಅಡಿ ಇರುವ ಆಳವಾದ ಘಟರವನ್ನು ಮುಚ್ಚಿಸಲು ಯಾವೊಬ್ಬ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲೀ ಮುಂದಾಗಿರುವದಿಲ್ಲ,
ಅಂಬ ನಗರಕ್ಕೆ ಇಲ್ಲಿಯವರೆಗೆ ಸಾಕಷ್ಟು ಅಧಿಕಾರಿಗಳು ಭೇಟಿ ಕೊಟ್ಟರು ಸಾಕಷ್ಟು ಬಾರಿ ಜನಪ್ರತಿನಿಧಿಗಳು ಭೇಟಿ ಕೊಟ್ಟರು ಕಣ್ಣಾರೆ ಕಂಡರು ಕಾಣದಂತೆ ಇರುವುದು ದೊಡ್ಡ ಅನಾಹುತಕ್ಕೆ ಕಾರಣವಾಗಿದೆ,
ಗ್ರಾಮದಲ್ಲಿ ಅದೇ ಶಾಲೆಯ ಮಧ್ಯದಲ್ಲಿ ನೀರು ತುಂಬಿರುವ ಗಟಾರದ ಮಧ್ಯೆ ಅಂಗನವಾಡಿ ಶಾಲೆಯು ಇರುವುದರಿಂದ ಅತಿ ಚಿಕ್ಕ ಮಕ್ಕಳು ಕೂಡ ಅಂಗನವಾಡಿ ಶಾಲೆಗೆ ಹೋಗಬೇಕಾಗಿದೆ, ಅದಲ್ಲದೆ ಇನ್ನು ಎರಡು ಕೊಟ್ಟಡಿ ಶಾಲೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದು ಶಾಲೆಯ ಮಕ್ಕಳು ಮತ್ತು ಅಂಗನವಾಡಿ ಮಕ್ಕಳು ಸೇರಿ ಸುಮಾರು ಎರಡು ನೂರಕ್ಕೂ ಹೆಚ್ಚು ಮಕ್ಕಳಿರುವುದರಿಂದ ಅಲ್ಲಿರುವ ಗಟಾರ ನೋಡಿ ಮತ್ತು ಸುಮಾರು ನಾಲ್ಕೈದು ಅಡಿ ನೀರು ನಿಂತಿರುವುದರಿಂದ ಮಕ್ಕಳ ಪಾಲಕರು ಭಯಭೀತಗೊಂಡು ಶಾಲೆಗೆ ಕಳಿಸಲು ನಿರಾಕರಿಸುತ್ತಿದ್ದಾರೆ, ಹಲವು ಬಾರಿ ಶಾಲೆಯ ಒಳಗೆ ಹಾವು ಕಪ್ಪೆಗಳು ಓಡಾಡುತ್ತಿದ್ದು ಮತ್ತು ಮಕ್ಕಳು ಕೂಡ ಭಯಭೀತಿಯಿಂದ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾರೆ, ಕಾರಣ ಸುಮಾರು ಬಾರಿ ಮಕ್ಕಳು ನೀರಿನಲ್ಲಿ ಬಿದ್ದು ಅಸ್ತವ್ಯಸ್ತಗೊಂಡ ರುವುದರಿಂದ ಅಲ್ಲಿ ನಿಂತಿರುವ ನೀರಿನಿಂದ ರೋಗರುಜಿನೆಗಳಿಗೆ ನಮ್ಮ ಮಕ್ಕಳು ಅನಾರೋಗ್ಯಕ್ಕೆ ಪೀಡಿತ ರಾಗುತ್ತಾರೆ ಎಂದು ಅಲ್ಲಿ ಗ್ರಾಮದ ಜನರು ಭಯಭೀತಿ ಗೊಂಡಿದ್ದಾರೆ, ದಯಮಾಡಿ ಈಗಲಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ ಮತ್ತು ಅಧಿಕಾರಿಗಳಾಗಲಿ ಕೂಡಲೇ ಆಳವಾದ ತಗ್ಗನ್ನು ಮುಚ್ಚಿ ಮತ್ತು ಸುಮಾರು ನಾಲ್ಕೈದು ಅಡಿ ನಿಂತಿರುವ ನೀರು ಕೆಟ್ಟ ವಾಸನೆಯಿಂದ ನಮ್ಮ ಮಕ್ಕಳನ್ನು ರಕ್ಷಿಸಬೇಕೆಂದು ಗ್ರಾಮದ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು,