ರಾಜನಹಳ್ಳಿ; ನಾಲ್ಕನೆಯ ಜಾತ್ರೆ ಸಮಿತಿ ಅಧ್ಯಕ್ಷರಾಗಿ ಟಿ.ರಘುಮೂರ್ತಿ ಆಯ್ಕೆ

ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯಲಿರುವ ಜಾತ್ರಾ ಸಮಿತಿಗೆ ಅಧ್ಯಕ್ಷರನ್ನಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಯವರನ್ನು ಆಯ್ಕೆ ಮಾಡಲಾಗಿದೆ

ಪ್ರಸನ್ನಾನಂದ ಪುರಿ ಶ್ರೀ ಮಾತನಾಡಿ, ವಾಲ್ಮೀಕಿ ಗುರುಪೀಠವು ಫೆ.2. 1998ರಲ್ಲಿ ಸ್ಥಾಪನೆಯಾಯಿತು, ಅಂದಿನ ಲಿಂಗೈಕ ಶ್ರೀಗಳಾದ ಪುಣ್ಯನಂದ ಪುರಿ ಶ್ರೀಗಳು, ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಸಮಾಜವನ್ನು ಸಂಘಟಿಸಿ ಒಂದು ಧಾರ್ಮಿಕ ಕ್ಷೇತ್ರವನ್ನಾಗಿ ಈ ಮಠವನ್ನು ಕಟ್ಟಿ ಬೆಳೆಸುವ ಸಂದರ್ಭದಲ್ಲಿ ಆಕಸ್ಮಿಕ ರೈಲು ಅಪಘಾತದಲ್ಲಿ ಮರಣ ಹೊಂದಿದ ಶ್ರೀಗಳು ತದನಂತರ ಸಮಾಜ ಬಂಧುಗಳು ನಮ್ಮನ್ನು 2008 ಆಗಸ್ಟ್ 14 ರಂದು ನೂತನ ಪೀಠಾಧ್ಯಕ್ಷರಾಗಿ ಆಯ್ಕೆ ಮಾಡಿದರು. ಆಯ್ಕೆಯಾದ ನಂತರ ಸಮಾಜದ ಸಂಘಟನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ ಎಂದರು.

ಈ ಜಾತ್ರೆಗೆ ರಾಜ್ಯದ ವಿವಿಧ ಸಮುದಯದ ಹಲವಾರು ಮಠಾಧೀಶರು ಪಾಲ್ಗೋಳ್ಳುವರು, ಇದೊಂದು ಪಕ್ಷಾತಿಕ, ಜಾತ್ಯಾತೀತ, ಕಾರ್ಯಕ್ರಮವಾಗಿದ್ದು ಎಲ್ಲಾ ಪಕ್ಷದ ಜನಪ್ರತಿನಿಧಿಗಳು, ಮುಖಂಡರನ್ನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಈ ಒಂದು ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ, ಈಗಾಗಲೇ ಮಠದ ಆವರಣದಲ್ಲಿ ಪೂರ್ವ ಸಿದ್ದತೆ ನಡೆಸಲಾಗುತ್ತಿದೆ ಎಂದರು.

ಇಂದು ರಾಜನಹಳ್ಳಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಸತೀಶ್ ಜಾರಕಿಹೊಳಿ, ರಾಮಚಂದ್ರಪ್ಪ, ಹರ್ತಿಕೋಟೆ ವೀರೇಂದ್ರ ಸಿಂಹ, ಓಬಳಪ್ಪ, ಹೊದಿಗೆರೆ ರಮೇಶ್ ಮುಂತಾದವರು ಭಾಗವಹಿಸಿದ್ದರು

Discover more from Valmiki Mithra

Subscribe now to keep reading and get access to the full archive.

Continue reading