Kichcha Sudeepa Temple : ಕಿಚ್ಚನಿಗೆ ದೇಶದೆಲ್ಲೆಡೆ ಅಭಿಮಾನಿ ಬಳಗವಿದೆ. ಈಗ ಅವರ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೆ ದೇವಾಲಯ ಕಟ್ಟಿ ಆರಾಧಿಸಲು ಮುಂದಾಗಿರುವುದು ಎಲ್ಲೆಡೆ ಭಾರಿ ಸುದ್ದಿ ಮಾಡಿದೆ.
ಸ್ಯಾಂಡಲ್ ವುಡ್ ನಿಂದ ಹಿಡಿದು ಬಾಲಿವುಡ್ ವರೆಗೂ(Sandalwood to Bollywood) ತಮ್ಮ ಛಾಪು ಮೂಡಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep)ಅವರಿಗೆ ಅಭಿಮಾನಿಗಳು ದೇವಾಲಯ (Temple) ನಿರ್ಮಿಸಿ ಪೂಜಿಸಲು ಮುಂದಾಗಿರವುದು ನಿಜಕ್ಕೂ ಸಂತಸದ ವಿಚಾರ, ಹಾಗೂ ಇದು ಕಿಚ್ಚನ ಮೇಲಿರುವ ಪ್ರೀತಿಯನ್ನು ಎತ್ತಿ (fans to worship)ತೋರಿಸುತ್ತದೆ. ಈಗಾಗಲೇ ಪ್ರಸಿದ್ಧ ವ್ಯಕ್ತಿಗಳ ಮೂರ್ತಿ ಕೆತ್ತಿ ಅವರಿಗೆ ದೇವಾಲಯ ನಿರ್ಮಿಸಿರುವುದನ್ನು ಕೇಳಿದ್ದೇವೆ, ಆದರೆ ಇದೇ ಮೊದಲ ಬಾರಿಗೆ ಕನ್ನಡದ ಒಬ್ಬ ನಟನಿಗೆ ದೇವಾಲಯ(temple) ನಿರ್ಮಿಸಲಾಗುತ್ತಿರುವುದು ದೊಡ್ಡ ಸಂಗತಿಯೇ ಸರಿ.
ಕನ್ನಡದ ಕಿಚ್ಚ ಸುದೀಪ್ ಅಂದರೆ ಕನ್ನಡಿಗರಿಗೆ ಏನು ಒಂಥರ ಹೆಮ್ಮೆ, ಎಲ್ಲೇ ಹೋದರು ಕನ್ನಡದ ಸಂಸ್ಕತಿಯನ್ನೇ ಎತ್ತಿಹಿಡಿಯುವ ಕಿಚ್ಚನಿಗೆ ದೇಶದೆಲ್ಲೆಡೆ ಅಭಿಮಾನಿ ಬಳಗವಿದೆ. ದೊಡ್ಡ ದೊಡ್ಡ ಸೆಲಿಬ್ರಿಟಿಗಳು ಸುದೀಪ್ ಅವರ ನಟನೆಗೆ, ಮ್ಯಾನರಿಸಂಗೆ ಮಾರು ಹೋಗಿದ್ದಾರೆ. ಆದರೆ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೆ ದೇವಾಲಯ ಕಟ್ಟಿ ಆರಾಧಿಸಲು ಮುಂದಾಗಿರುವುದು ಇದೀಗ ಎಲ್ಲೆಡೆ ಭಾರಿ ಸುದ್ದಿ ಮಾಡಿದೆ.
ಕುರುಕುಂದ ಗ್ರಾಮದಲ್ಲಿ ದೇವಾಲಯ
ಕಿಚ್ಚ ನ ರಾಯಚೂರಿನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೂರ್ತಿ ನಿರ್ಮಿಸಿ ಗುಡಿಯೊಂದನ್ನು ಕಟ್ಟುತ್ತಿದ್ದಾರೆ. ನಾವೆಲ್ಲಾ ಪರಭಾಷೆಯಲ್ಲಿ ಇಂತಹವೊಂದು ಆಚರಣೆಯನ್ನು ನೋಡಿದ್ದೇವೆ, ಇದೇ ಮೊದಲ ಬಾರಿ ಕನ್ನಡ ನಟನಿಗೆ ಇಂತಹ ಒಂದು ಭಾಗ್ಯ ಸಿಕ್ಕಿದೆ ಅಂದರೆ, ಅದು ನಿಜಕ್ಕೂ ಅಭಿಮಾನಿಗಳಿಂದ ಸಿಗುವ ಸೌಭಾಗ್ಯ ಎನ್ನಬೇಕು. ರಾಯಚೂರು ಜಿಲ್ಲೆಯ, ದೇವದುರ್ಗ ತಾಲೂಕಿನ ಕುರುಕುಂದ ಗ್ರಾಮದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ದೇವಸ್ಥಾನ ನಿರ್ಮಿಸಲಾಗುತ್ತಿದೆ. ಈಗಾಗಲೇ ಬಹುತೇಕ ದೇವಸ್ಥಾನದ ಕಾರ್ಯಗಳು ಮುಗಿದಿದ್ದು, ಇನ್ನು ಕೆಲವು ದಿನಗಳ ಕೆಲಸ ಬಾಕಿ ಉಳಿದಿದ್ದು, ಶೀಘ್ರದಲ್ಲಿ ಈ ದೇವಾಲಯ ಉದ್ಘಾಟನೆಗೊಂಡು ಕಿಚ್ಚನಿಗೆ ಪೂಜೆಯೂ ನಡೆಯಲಿದೆ.
ಕಿಚ್ಚ ಸುದೀಪ್ ಸಾಧನೆಗೆ ಮನ್ನಣೆ
ಕಿಚ್ಚ ಸುದೀಪ್ ಗುಡಿಯನ್ನು ಸುದೀಪ್ ಅಭಿಮಾನಿಗಳು ಕಳೆದ ಮೂರು ತಿಂಗಳಿಂದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮೊದಲು ಕುರುಕುಂದ ಗ್ರಾಮದ ಜನರು ವಾಲ್ಮೀಕಿ ಗುಡಿ ಕಟ್ಟಲು ಮುಂದಾಗಿದ್ದರು. ಆ ವೇಳೆ ಕಿಚ್ಚನ ಅಭಿಮಾನಿಗಳು ಕಿಚ್ಚ ಸುದೀಪ್‌ಗೆ ಗುಡಿ ಕಟ್ಟಬೇಕು ಎಂದು ನಿರ್ಧರಿಸಿದ್ದರು. ಸುದೀಪ್ ಅವರು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಅವರಿಗೆ ಮನ್ನಣೆ ನೀಡಲು ಗುಡಿ ನಿರ್ಮಾಣ ಮಾಡಲು ಮುಂದಾಗಿದ್ದರು. ಈ ವೇಳೆ ಇದೇ ಗ್ರಾಮದ ಶರಣು ಬಸವ ನಾಯಕ ಎನ್ನುವವರು ಉಚಿತವಾಗಿ 35 -45 ಚದರ ಅಡಿ ವಿಸ್ತೀರ್ಣ ಜಾಗ ನೀಡಿದ್ದರು. ಇಲ್ಲಿಂದ ಅಭಿಮಾನಿಗಳೇ ಸೇರಿ ಹಣ ಹೊಂದಿಸಿ, ಗುಡಿ ಕಟ್ಟುತ್ತಿರುವುದು ಅಭಿಮಾನವನ್ನು ತೋರಿಸಿದ್ದಾರೆ.
12 ಲಕ್ಷ ವೆಚ್ಚದಲ್ಲಿ ನಿರ್ಮಾಣ
12 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಗುಡಿಯಲ್ಲಿ ಗುಡಿಯೊಳಗೆ ಗಾರ್ಡನ್, ಸುತ್ತಲೂ ಕಾಂಪೌಂಡ್, ಲೈಟಿಂಗ್ ಮಾಡಲಾಗಿದೆ. ಸಿಸಿ ಕ್ಯಾಮರಾವನ್ನೂ ಅಳವಡಿಸಲಾಗಿದೆ. ಇನ್ನೊಂದು 20 ದಿನಗಳಲ್ಲಿ ಕೆಲಸ ಮುಗಿಯುತ್ತೆ. ಈ ಗುಡಿಯೊಳಗೆ ವಾಲ್ಕೀಕಿ ಮೂರ್ತಿ ಹಾಗೂ ಸುದೀಪ್ ಮೂರ್ತಿ ಇರಲಿದೆ ಎಂದು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ದೇವರಾಜ ನಾಯಕ ವಿವರಿಸಿದ್ದಾರೆ. ಕೆಲವು ಗಣ್ಯರು 2-3 ಲಕ್ಷ ಸಹಾಯ ಮಾಡಿದ್ದು ಬಿಟ್ಟರೆ, ಉಳಿದ ಹಣವನ್ನು ಅಭಿಮಾನಿಗಳೇ ಹಾಕಿ ಗುಡಿ ಕಟ್ಟುತ್ತಿದ್ದಾರೆ. ಕಿಚ್ಚ ಗುಡಿಯೊಳಗೆ ಪುನೀತ್ ರಾಜ್‌ಕುಮಾರ್ ಫೋಟೊಗೆ ಗ್ಲಾಸ್ ಫಿಟ್ಟಿಂಗ್ ಪೋಟೊವನ್ನು ಈ ಗುಡಿಯೊಳಗೆ ಸ್ಥಾಪನೆ ಮಾಡಿ ದೇವರಂತೆ ಪೂಜಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.
ಇನ್ನು ಈ ವಿಚಾರ ತಿಳಿದು ಕಿಚ್ಚ ಸುದೀಪ್ ಗುಡಿಯನ್ನು ಕಟ್ಟದೆ ಇರುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ, ನಾವು ಪ್ರೀತಿಯಿಂದ ಕಿಚ್ಚ ಸುದೀಪ್‌ಗಾಗಿ ಮೂರ್ತಿ ನಿರ್ಮಿಸಿ ಗುಡಿ ಕಟ್ಟಿದ್ದೇವೆ. ಅವರು ಗುಡಿ ನೋಡಲು ಬರುತ್ತೇವೆ ಎಂದಿದ್ದಾರೆ. ಉದ್ಘಾಟನೆ ಬರುತ್ತಾ ಇಲ್ಲವಾ ಅನ್ನುವುದು ಇನ್ನೂ ಗೊತ್ತಿಲ್ಲಎಂದು ಅವರ ಹೇಳಿದ್ದಾರೆ. ಗುಡಿ ಕಾಯಲು ಅಭಿಮಾನಿಗಳು ವಾಚ್ ಮ್ಯಾನ್ ಕೂಡ ನೇಮಿಸಿ ತಮ್ಮ ಕೈನಿಂದಲೇ ಸಂಬಳ ಕೊಡಲು ನಿರ್ಧರಿಸಿದ್ದಾರೆ. ಇದರ ಮಧ್ಯೆ ಕಿಚ್ಚ ಸುದೀಪ್ ಅವರ ಮೂರ್ತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಚಾರ ತಿಳಿದ ಅಪಾರ ಅಭಿಮಾನಿಗಳು ಸಂಭ್ರಮದಿಂದ ಶೇರ್ ಮಾಡುತ್ತಿದ್ದಾರೆ.